ರಶ್ಮಿಕಾ ಮಂದಣ್ಣ- ಪೂಜಾ ಹೆಗ್ಡೆಗೆ ಟಫ್‌ ಕಾಂಪಿಟೇಷನ್‌ ಕೊಡುತ್ತಿದ್ದಾರೆ ಈ ಇಬ್ಬರು ಕನ್ನಡತಿಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸಿನಿಮಾಗಳಲ್ಲಿ ಹಿರೋಯಿನ್‌ಗಳು ಹೆಚ್ಚು ಕಾಲ ಚಾಲ್ತಿಯಲ್ಲಿರೋದು ಕಷ್ಟ. ಹೊಸ ಹೊಸ ನಾಯಕಿಯರ ಎಂಟ್ರಿ ಆಗುತ್ತಿದ್ದಂತೆ ಹಳಬರು ತೆರೆಮರೆಗೆ ಸರಿಯೋದು ಕಾಮನ್. ಆ ವಿಚಾರವಿರಲಿ, ಸದ್ಯ ಟಾಲಿವುಡ್‌ ಚಿತ್ರರಂಗದ ವಿಚಾರಕ್ಕೆ ಬಂದರೆ ಅಲ್ಲಿ ಕನ್ನಡತಿಯರದ್ದೇ ಹವಾ.. ಟಾಲಿವುಡ್‌ ನ ಎವರ್‌ ಗ್ರೀನ್‌ ತಾರೆಯರಾದ ತಮನ್ನಾ, ಕಾಜಲ್‌, ಸಮಂತಾರನ್ನು ಹಿಂದಿಕ್ಕಿ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ಟಾಪ್ ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಇಬ್ಬರೂ ನಟಿಯರು ಸ್ಟಾರ್‌ ಹೀರೋಗಳೊಂದಿಗೆ ನಟಿಸಿ ಒಳ್ಳೆಯ ಹೆಸರು ಗಳಿಸಿಕೊಂಡಿದ್ದಾರೆ. ಆದರೆ ಇದೀಗ ಇಬ್ಬರಿಬ್ಬರ ಸ್ಥಾನಕ್ಕೆ ಮತ್ತಿಬ್ಬರು ಹೀರೋಯಿನ್‌ಗಳ ಎಂಟ್ರಿ ಆಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಟಾಲಿವುಡ್‌ನ ಸ್ಟಾರ್‌ ಗಿರಿಯಲ್ಲಿ ಇರುವುದು ಇಬ್ಬರೂ ಕನ್ನಡ ನಟಿಮಣಿಯರೇ. ಇದೀಗ ಇವರಿಬ್ಬರನ್ನು ಹಿಂದಿಕ್ಕಲು ಇನ್ನೂ ಒಬ್ಬರು ಕನ್ನಡದ ಹೀರೋಯಿನ್‌ಗಳು ಹೆಜ್ಜೆ ಊರಿದ್ದಾರೆ ಎನ್ನಲಾಗುತ್ತಿದೆ. ಉಪ್ಪೆನ ಬೆಡಗಿ ಕೃತಿ ಶೆಟ್ಟಿ ಹಾಗೂ ಪೆಳ್ಳಿ ಸಂದಡಿ ನಾಯಕಿ ಶ್ರೀಲೀಲಾ ಆ ಇಬ್ಬರು ನಾಯಕಿಯರು. ಇವರಿಬ್ಬರು ಬ್ಯಾಕ್‌ ಟು ಬ್ಯಾಕ್ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಈಗಾಗಲೇ ರಶ್ಮಿಕಾ ಹಾಗೂ ಪೂಜಾ ಹೆಗ್ಡೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಇವರಿಬ್ಬರಿಗೆ ಶ್ರೀಲೀಲಾ ಹಾಗೂ ಕೃತಿ ಶೆಟ್ಟಿ ಅವರು ಭರ್ಜರಿ ಪೈಪೋಟಿ ಒಡ್ಡುತ್ತಿದ್ದಾರೆ ಎನ್ನುತ್ತಿವೆ ಸಿನಿಮೂಲಗಳು.
ಈ ಇಬ್ಬರೂ ತಮ್ಮ ಮೊದಲ  ಸಿನಿಮಾಗಳಲ್ಲಿಯೇ ಅಭಿಮಾನಿಗಳ ಮನಸನ್ನು ಗೆದ್ದಿದ್ದಾರೆ. ಸ್ಟಾರ್‌ ಹಿರೋಯಿನ್‌ಗಳು ಪಡೆಯುವಷ್ಟೇ ಸಂಭಾವನೆಯನ್ನು ಇವರಿಬ್ಬರು ಪಡೆಯುತ್ತಿದ್ದಾರೆ ಎಂಬ ಸುದ್ದಿಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!