CINE| ಶೂಟಿಂಗ್ ಬ್ರೇಕ್ ಸಿಕ್ಕಾಗ ರಶ್ಮಿಕಾ ಮಂದಣ್ಣ ಎಲ್ಲಿಗೆ ಹೋಗ್ತಾರೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಶೂಟಿಂಗ್‌ ಬ್ರೇಕ್‌ ಸಿಕ್ಕಾಗೆಲ್ಲಾ ಎಲ್ಲಿಗೆ ಹೋಗ್ತಾರೆ, ಏನು ಮಾಡ್ತಾರೆ ಇತ್ಯಾದಿ ಪ್ರಶ್ನೆಗಳೆಲ್ಲಾ ಅಭಿಮಾನಿಗಳ ಮನಸಲ್ಲಿ ಇದ್ದೇ ಇರುತ್ತದೆ. ಕೊನೆಗೂ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಸಂದೀಪ್ ವಂಗಾ ನಿರ್ದೇಶನದ ʻಆನಿಮಲ್‌ʼ ಸಿನಿಮಾ ಪ್ರಚಾರದ ಭಾಗವಾಗಿ ರಣಬೀರ್, ರಶ್ಮಿಕಾ, ಸಂದೀಪ್ ವಂಗ ಬಾಲಕೃಷ್ಣ ನಡೆಸಿಕೊಡುವ ಅನ್‌ಸ್ಟಾಪಬಲ್ ಶೋಗೆ ಬಂದಿದ್ದು, ಇಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದರು.

Unstoppable with NBK: Ranbir Kapoor, Rashmika Mandanna dance with Balayya in new promo - India Today

ಶೂಟಿಂಗ್ ಗ್ಯಾಪ್ ಇದ್ದರೆ ರಶ್ಮಿಕಾ ಅವರನ್ನು ಎಲ್ಲಿ ಭೇಟಿಯಾಗಹುದು? ಶೂಟಿಂಗ್ ಇಲ್ಲದಿದ್ದಾಗ ಎಲ್ಲಿಗೆ ಹೋಗುತ್ತಾರೆ? ಎಂದು ಬಾಲಕೃಷ್ಣ ಕೇಳಿದ ಪ್ರಶ್ನೆಗೆ ರಣಬೀರ್ ಮತ್ತು ಸಂದೀಪ್ ಇಬ್ಬರೂ ಒಂದೇ ಉತ್ತರ ನೀಡಿದ್ದಾರೆ. ರಶ್ಮಿಕಾ ಶೂಟಿಂಗ್ ಇಲ್ಲದಿದ್ದರೂ, ಬ್ರೇಕ್‌ ಸಿಕ್ಕರೂ ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಹೇಳಿದರು.

Ranbir Kapoor, Rashmika Mandanna pose with Nandamuri Balakrishna as Team Animal shoots for Unstoppable with NBK | Bollywood News - The Indian Express

ಇದೇ ವೇಳೆ ಬಾಲಕೃಷ್ಣ ಈ ಸಂಚಿಕೆಯಲ್ಲಿಯೇ ವಿಜಯ್ ದೇವರಕೊಂಡಗೆ ಕರೆ ಮಾಡಿ ನೀವು ಯಾರನ್ನು ಪ್ರೀತಿಸುತ್ತೀರಿ ಮುಂತಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಅನ್‌ಸ್ಟಾಪಬಲ್ ಶೋನಲ್ಲಿಯೂ ರಶ್ಮಿಕಾ ಮತ್ತು ವಿಜಯ್ ಪರಸ್ಪರ ಪ್ರೀತಿಸುತ್ತಾರೆ ವದಂತಿಗೆ ಮಾತ್ರ ಬ್ರೇಕ್‌ ಬಿದ್ದಿಲ್ಲ. ರಶ್ಮಿಕಾ ವಿಜಯ್ ಜೊತೆ ಫೋನ್ ನಲ್ಲಿ ಮಾತನಾಡುವಾಗ ನಾಚಿಕೊಂಡಿದ್ದು ಅಭಿಮಾನಿಗಳಿಗೆ ಮತ್ತಷ್ಟು ಅನುಮಾನ ಮೂಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!