Saturday, December 2, 2023

Latest Posts

CINE| ವಿಮಾನ ನಡೆಸೋದು ಬಿಟ್ಟು ನಿಮ್ಮ ಅವತಾರವೇನು?- ರಶ್ಮಿಕಾ, ರಣಬೀರ್ ಸಖತ್‌ ಟ್ರೋಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಶ್ಮಿಕಾ ಮಂದಣ್ಣ ಸದ್ಯಕ್ಕೆ ರಣಬೀರ್ ಕಪೂರ್ ಜೊತೆಯಾಗಿ ‘ಅನಿಮಲ್’ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಅರ್ಜುನ್ ರೆಡ್ಡಿ ನಿರ್ದೇಶಕ ಸಂದೀಪ್ ರೆಡ್ಡಿ ನಿರ್ದೇಶನದ ಈ ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಉತ್ತಮ ನಿರೀಕ್ಷೆ ಹುಟ್ಟಿಕೊಂಡಿತ್ತು. ನಿನ್ನೆ ಈ ಸಿನಿಮಾದಿಂದ ‘ಹುವಾ ಮೈನ್’ ಹಾಡು ಬಿಡುಗಡೆಯಾಗಿದ್ದು, ಈ ಹಾಡಿನ ಮೂಲಕ ರಶ್ಮಿಕಾ, ರಣಬೀರ್‌ ಸಖತ್‌ ಟ್ರೋಲ್‌ಗೆ ಒಳಗಾಗಿದ್ದಾರೆ.

ಈ ಹಾಡಿನಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ನಡುವಿನ ಲಿಪ್‌ಲಾಕ್ ಬಗ್ಗೆ ಹೆಚ್ಚು ಟ್ರೋಲ್‌ ಮಾಡುತ್ತಿದ್ದು, ಮನೆ, ಮನೆಯವರೆದರು, ವಿಮಾನ ಓಡಿಸುತ್ತಾ ಏನ್ರೋ ನಿಮ್ಮ ಅವಸ್ತೆ, ವಿಮಾನ ಓಡಿಸೋದು ಬಿಟ್ಟು ನಿಮ್ಮ ಅವತಾರವೇನು? ಎಂಬ ಮೀಮ್ಸ್‌ಗಳು ನೆಟ್‌ನಲ್ಲಿ ಓಡಾಡುತ್ತಿವೆ. ಅಷ್ಟೇ ಅಲ್ಲ ಈ ಹಾಡಿಗೆ ವಿಜಯ್‌ ದೇವರಕೊಂಡನನ್ನು ಎಳೆತಂದಿದ್ದು, ಈ ಹಾಡು ನೋಡುತ್ತಿದ್ದರೆ, ಅರ್ಜುನ್ ರೆಡ್ಡಿ ಸಿನಿಮಾ ನೆನಪಾಗುತ್ತದೆ ಎಂಬ ಕಮೆಂಟ್‌ಗಳೂ ಓಡಾಡುತ್ತಿವೆ.

ಬೈಕು, ಕಾರುಗಳಲ್ಲಿ ಮತ್ತು ಕೊಡುವುದನ್ನು ನೋಡಿದ್ದೇವೆ, ಆದರೆ ಫ್ಲೈಟ್ ರೈಡ್ ಮಾಡುವಾಗ ಮುತ್ತು ಕೊಡುವುದಂದರೇನು ಸಾಮಾನ್ಯವೇ?  ಅದೇನೋ ಬೈಕ್‌ ಕಲಿಸಿದಷ್ಟೂ ಸುಲಭವಾಗಿ ಫ್ಲೈಟ್‌ ಓಡಿಸುವುದನ್ನು ಕಲಿಸೋದು, ಸಾಲದೆಂಬಂತೆ ಸ್ಟೀರಿಂಗ್‌ ಬಿಟ್ಟು ಮುತ್ತು ಕೊಡುವುದು ಇದೆಲ್ಲಾ ಏನು? ಎಂದು ಕಾಲೆಳೆಯುತ್ತಿದ್ದಾರೆ.

ವಿಜಯ್ ದೇವರಕೊಂಡ ಗೆಳತಿಗೆ ರಣಬೀರ್ ಕಪೂರ್ ಮುತ್ತು ಕೊಡುತ್ತಿದ್ದಾರೆ ಎಂದು ಮೀಮ್ಸ್, ವಿಡಿಯೋಗಳು ಹರಿದಾಡುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!