ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಅಭಿನಯದ ಕುಬೇರ ಸಿನಿಮಾ ಟೀಸರ್ ರಿಲೀಸ್ ಆಗಿದೆ. ರಶ್ಮಿಕಾ ಮಂದಣ್ಣ ನೋಟಿನ ಕಂತೆಗಳು ತುಂಬಿರುವ ಸೂಟ್ಕೇಸ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಇದೆ.
ಈ ಸಿನಿಮಾ ಕೂಡ ಅವರ ವೃತ್ತಿಜೀವನಕ್ಕೆ ಪ್ಲಸ್ ಆಗುವ ಸೂಚನೆ ಸಿಕ್ಕಿದೆ. 48 ಸೆಕೆಂಡ್ಗಳ ಟೀಸರ್ನಲ್ಲಿ ರಶ್ಮಿಕಾ ಮಂದಣ್ಣ ಅವರು ನೆಲದ ಒಳಗೆ ಹೂತಿಟ್ಟ ದೊಡ್ಡ ಸೂಟ್ಕೇಸ್ ಹೊರಗೆ ತೆಗೆಯುತ್ತಾರೆ. ಅದರ ತುಂಬ ಹಣದ ಕಂತೆಗಳೇ ಇವೆ. ದುಡ್ಡು ನೋಡಿ ಖುಷಿ ಆಗುವ ರಶ್ಮಿಕಾ ಹಣಕ್ಕೆ ನಮಸ್ಕರಿಸಿ ಮುಂದೆ ಹೋಗುತ್ತಾರೆ.