March 23, 2026
Monday, March 23, 2026
spot_img

ರಶ್ಮಿಕಾ,ವಿಜಯ್ ಆರತಕ್ಷತೆ ಸಂಭ್ರಮ: ಈ ಕ್ಷಣ ವಿರೋಶ್ ಜೋಡಿ ಅಭಿಮಾನಿಗಳಿಗೆ ಮಾಡಿದ ಮನವಿಯೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಅದ್ದೂರಿಯಾಗಿ ನಡೆದಿದ್ದು, ಇದೀಗ ವಿರೋಶ್ ಜೋಡಿ ಹೈದರಾಬಾದ್ ನಲ್ಲಿ ಆರತಕ್ಷತೆ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ.

ಇದೇ ವೇಳೆ ಹೈದರಾಬಾದ್ ಆರತಕ್ಷತೆ ಕಾರ್ಯಕ್ರಮ ಕುರಿತು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ವಿಶೇಷ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಹೈದರಾಬಾದ್ ನಲ್ಲಿ ಮಾರ್ಚ್ 4ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ದೇಶಾದ್ಯಂತ ಅಭಿಮಾನಿ ಬಳಗಕ್ಕೆ ವಿರೋಶ್ ಜೋಡಿ ಕೈಜೋಡಿಸಿ ಮನವಿ ಮಾಡಿದೆ. ಪೊಲೀಸರ ಸೂಚನೆ, ಭದ್ರತಾ ಕಾರಣದಿಂದ ಮದುವೆ ಆಮಂತ್ರಣ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಅಭಿಮಾನಿಗಳು ನಮ್ಮ ಮದುವೆಯನ್ನು ಸಂಭ್ರಮಿಸಿದ್ದೀರಿ, ಶುಭಹಾರೈಸಿದ್ದೀರಿ. ಆದರೆ ಹಲವು ಗಣ್ಯರು ಆಗಮಿಸುತ್ತಿರುವ ಕಾರಣ ಸುರಕ್ಷತಾ ಕಾರಣದಿಂದ ಎಲ್ಲರಿಗೂ ಆರತಕ್ಷತೆಯಲ್ಲಿ ಭಾಗವಹಿಸಲು ಅವಕಾಶ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ವಿರೋಶ್ ರೆಸೆಪ್ಶೆನ್ ಆಮಂತ್ರ ಪತ್ರಿಕೆ ಇದ್ದವರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.ಪ್ರತಿಷ್ಠಿತ ರಾಜಕಾರಣಿಗಳು, ಗಣ್ಯರು, ಕನ್ನಡ, ತೆಲುಗು, ಮಲೆಯಾಳಂ, ತಮಿಳು, ಹಿಂದಿ ಸೇರಿದಂತೆ ಸಿನಿಮಾ ಕ್ಷೇತ್ರದ ಗಣ್ಯರು, ಸೆಲೆಬ್ರೆಟಿಗಳು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ದಯವಿಟ್ಟು ಸಹಕರಿಸಬೇಕು. ನಿಮ್ಮ ಪ್ರೀತಿ, ಆಶೀರ್ವಾದ ಹೀಗೆ ಇರಲಿ ಎಂದು ವಿರೋಶ್ ಜೋಡಿ ಮನವಿ ಮಾಡಿದ್ದಾರೆ.

ಇದು ಸುರಕ್ಷತಾ ದೃಷ್ಟಿಯಿಂದ ಕೈಗೊಂಡಿರುವ ಕ್ರಮಗಳಾಗಿದೆ. ಪೊಲೀಸರು, ಸ್ಥಳೀಯ ಭದ್ರತಾ ಪಡೆಗಳು ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಕಾರ್ಯಕ್ರಮವನ್ನು ಯಾವುದೇ ಗೊಂದಲವಿಲ್ಲದೆ, ಸುಸೂತ್ರವಾಗಿ ನಡೆಸಲು ನಾವು ಬದ್ಧರಾಗಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ವಿರೋಶ್ ಜೋಡಿ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !