ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮಿತಾಬ್ ಬಚ್ಚನ್ ಜತೆ ಗುಡ್ ಬೈನಲ್ಲಿ ನಟಿಸಿ ಬಾಲಿವುಡ್ಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಇದೀಗ ರಣ್ಬೀರ್ ಕಪೂರ್ ಜತೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನಿಮಲ್ ಸಿನಿಮಾ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ನಟಿ ರಶ್ಮಿಕಾ ಸೆಟ್ನಲ್ಲಿ ಕಣ್ಣೀರು ಹಾಕಿದ್ದರಂತೆ, ಅದು ರಣ್ಬೀರ್ ಅವರನ್ನು ಅಳಿಸಿದ್ದರಂತೆ.
ಹೌದು, ಸೆಟ್ನಲ್ಲಿ ಕೊಡುವ ತಿಂಡಿ ಬಗ್ಗೆ ರಶ್ಮಿಕಾ ಪ್ರತಿದಿನ ರಣ್ಬೀರ್ ಬಳಿ ಬಂದು ದೂರುತ್ತಿದ್ದರಂತೆ, ತಿಂಡಿ ಚೆನ್ನಾಗಿಲ್ಲ, ರುಚಿ ಇಲ್ಲ , ಬೋರಿಂಗ್ ಊಟ ಹೀಗೆ.. ಇದಕ್ಕಾಗಿ ರಣ್ಬೀರ್ ತಮ್ಮ ಶೆಫ್ನಿಂದ ತಿಂಡಿ ಮಾಡಿಸಿಕೊಂಡು ತಂದಿದ್ದರಂತೆ. ಈ ತಿಂಡಿ ತಿಂದ ರಶ್ಮಿಕಾ ಇಷ್ಟೊಂದು ರುಚಿ ಹೇಗೆ ಎಂದು ವಿಚಾರಿಸಿದಾಗ ಅದು ರಣ್ಬೀರ್ ಆಕೆಗಾಗಿ ತರಿಸಿದ್ದು ಎಂದು ತಿಳಿದಿದೆ.
ಆಗ ಖುಷಿಯಿಂದ ರಶ್ಮಿಕಾ ಕಣ್ಣೀರು ಹಾಕಿದ್ದಾರೆ. ನೀವು ಪರ್ಸನಲ್ ಶೆಫ್ ಇಟ್ಟುಕೊಂಡಿದ್ದೀರಿ, ನಾವು ಮಾಮೂಲಿ ಜನ ಸೆಟ್ಗೆ ಬಂದೇ ತಿನ್ನಬೇಕು. ಇಷ್ಟು ಸ್ವೀಟ್ ಬಿಹೇವಿಯರ್ಗಾಗಿ ಧನ್ಯವಾದಗಳು ಎಂದು ಕಣ್ಣೀರು ಹಾಕಿದ್ದಾರೆ. ಇದು ಕಣ್ಣೀರಲ್ಲ, ಆನಂದ ಬಾಷ್ಪ ಎನ್ನಬಹುದು!