ಹೊಸದಿಗಂತ ಡಿಜಿಟಲ್ ಡೆಸ್ಕ್:
“ಭಾರತದ ಲಕ್ಷಾಂತರ ಜನರ ಭಾವನೆ ಹಾಗೂ ಸಾವಿರಾರು ವರ್ಷಗಳ ಸಂಸ್ಕೃತಿಯನ್ನು ಗಮನಿಸಿ, ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನಿರಾಕರಿಸಿರುವ ಸುಪ್ರೀಂಕೋರ್ಟ್ ಆದೇಶವು ಅಭಿನಂದನೀಯ” ಎಂದು ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಲಿಕಾ ವಿ ಶಾಂತಾ ಕುಮಾರಿ ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಜೀವನ ಪದ್ಧತಿಯನ್ನು ಸಂರಕ್ಷಿಸುವ ದೃಷ್ಟಿಕೋನವು ಭವಿಷ್ಯದಲ್ಲೂ ಹೀಗೆಯೇ ಇರಲಿ ಎಂದು ಅಪೇಕ್ಷಿಸುತ್ತಿರುವುದಾಗಿ ಅವರು ಹೇಳಿದ್ದಾರೆ.