ಹೊಸದಿಗಂತ ವರದಿ, ಮೈಸೂರು :
ಈ ಬಾರಿ ನಡೆಯುತ್ತಿರುವ ಮೈಸೂರು ದಸರಾ ಅಧಿಕಾರಿಗಳ ದರ್ಬಾರ್ ಆಗಿದೆ. ಜನರ ದಸರಾ ಆಗಿಲ್ಲ ಎಂದು ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಕಿಡಿಕಾರಿದರು.
ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಕೂಡ ಏಳು ಬಾರಿ ದಸರಾ ನಡೆಸಿದ್ದೇನೆ.
ಆದರೆ ಈ ಬಾರಿಯ ದಸರಾದ ಯಾವ ಉಪಸಮಿತಿಯಲ್ಲಿ ಜನಪ್ರತಿನಿಧಿಗಳು ಇಲ್ಲ. ಸಂಪೂರ್ಣ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ.
ಸಾಹಿತ್ಯದಿಂದ ವಿಧಾನಪರಿಷತ್‌ಗೆ ನಾನು ನಾಮಂಕಿತನಾಗಿದ್ದೇನೆ. ನನ್ನನ್ನ ಹೇಗೆ ದಸರಾದಲ್ಲಿ ಬಳಸಿಕೊಳ್ಳಬೇಕು.?
ಕಾರ್ಯಕ್ರಮಗಳು ಸರಿಯಾಗಿ ಆಗ್ತಿಲ್ಲ. ನಾವೂ ಹಿಂದೆ ಮಾಡಿದ್ದು ಬಿಟ್ಟರೇ, ಹೊಸದೇನು ದಸರಾದಲ್ಲಿ ಆಗ್ತಿಲ್ಲ.ಕಲಾವಿದರು ಕಾರ್ಯಕ್ರಮಗಳನ್ನ ಕೊಡೋದೆ ಧನ್ಯ ಅಂತಿದ್ರು.ಹೋಗುವಾಗ ಗೌರವ ಧನ ಕೊಡ್ತಿದ್ರು.ಆದರೆ ಇವಾಗ ನೀನು ಸ್ವಲೊ ತಕೋ ನಾನು ಸ್ವಲ್ಪ ತಕೋತ್ತೀನಿ ಅನ್ನೋವ ಹಾಗೆ ಆಗಿದೆ.
ಸಂಸ್ಕೃತಿಯನ್ನ ಹಾಳುಮಾಡುವ ಕೆಲಸ ಆಗ್ತಿದೆ ಎಂದು ಪರೋಕ್ಷವಾಗಿ ಕಲಾವಿದರ ಹಣಕ್ಕು ಕಮಿಷನ್ ಕೊಡುವ ಪರಿಸ್ಥಿತಿಯಿದೆ ಎಂದ ನಡೆಸಿದರು.