ಹೊಸದಿಗಂತ ವರದಿ,ತುಮಕೂರು:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ವ ಪ್ರಚಾರಕರಾದ ಕೃಷ್ಣಮೂರ್ತಿ ಹೆಗಡೆ (61) ಅವರು ಮಧ್ಯಾಹ್ನ 1:45 ರ ಸುಮಾರಿಗೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಬನವಾಸಿ ತಾಲ್ಲೂಕಿನ ಕಲಗುಂದಿ ಕೊಪ್ಪ ಸಿರ್ಸಿಯವರಾದ ಕೃಷ್ಣ ಮೂರ್ತಿ ಅವರು ತುಮಕೂರಿನಲ್ಲಿ ಹೊಸದಿಗಂತ ಸೇರಿದಂತೆ ಇತರ ಪತ್ರಿಕೆಗಳ ವಿತರಕರಾಗಿದ್ದರು.
ಗುರುವಾರ ಮುಂಜಾನೆ 4.30 ರ ವೇಳೆ ತಮ್ಮ ಪೇಪರ್ ವಿತರಣೆ ಕೆಲಸಕ್ಕೆ ಹೊರಟಾಗ ಸುಸ್ತು ಕಂಡಿದೆ. ತಕ್ಷಣ ಮನೆಯವರ ಜೊತೆ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ಇದಾದ ಬಳಿಕ ಸಂಜೆ ವೇಳೆ ತಲೆಯಲ್ಲಿ ರಕ್ತನಾಳ ಒಡೆದು ಹೆಪ್ಪುಗಟ್ಟಿದ ಮಾಹಿತಿಯನ್ನು ವೈದ್ಯರು ನೀಡಿದ್ದರು. ಇಂದು ಬೆಳಿಗ್ಗೆ ಬ್ರೈನ್ ಹ್ಯಾಮರೇಜ್ ಆಗಿ ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಮೃತರು ಪತ್ನಿ, ಪುತ್ರಿ ಮತ್ತು ತಾಯಿಯನ್ನು ಅಗಲಿದ್ದಾರೆ.