ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ್, ಲೇಖಕ ಚಂದ್ರಶೇಖರ ಭಂಡಾರಿ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ್ , ಲೇಖಕ, ಕವಿ ಚಂದ್ರಶೇಖರ ಭಂಡಾರಿ ಅವರು ಭಾನುವಾರ ಅಪರಾಹ್ನ ೩ ಗಂಟೆಗೆ ಬೆಂಗಳೂರಿನ ಪ್ರಾಂತ ಸಂಘ ಕಾರ್ಯಾಲಯ ಕೇಶವಕೃಪಾದಲ್ಲಿ ದೈವಾನರಾದರು. ಅವರಿಗೆ 87 ವರ್ಷ ಪ್ರಾಯವಾಗಿತ್ತು.

ಮೂಲತಃ ಉಡುಪಿ ಜಿಲ್ಲೆಯವರಾದ ಭಂಡಾರಿಯವರು ಕರ್ನಾಟಕದ ಹಿರಿಯ ಪ್ರಚಾರಕರಾಗಿದ್ದು, ಪ್ರಾಂತ ಪ್ರಚಾರ ಪ್ರಮುಖರಾಗಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ, ವಿಶ್ವಸಂವಾದದ ಸ್ಥಾಪಕ ವಿಶ್ವಸ್ಥರಾಗಿ ಸೇವೆ ಸಲ್ಲಿಸಿದ್ದರು.

ಅವರು ಮಂಗಳೂರು ವಿಭಾಗ ಪ್ರಚಾರಕರಾಗಿ ದ.ಕ.ಜಿಲ್ಲೆ, ಉಡುಪಿ, ಕೊಡಗು, ಕಾಸರಗೋಡು ಭಾಗದಲ್ಲಿ ಅಪಾರ ಜನಾದರಣೆ ಪಡೆದಿದ್ದರು.

ಅನೇಕ ಪುಸ್ತಕಗಳನ್ನು, ಅನುವಾದಗಳನ್ನು , ನೂರಾರು ಲೇಖನಗಳನ್ನು, ಕವಿತೆಗಳನ್ನು ರಚಿಸಿದ್ದರು. ಅವರಿಗೆ ಅನೇಕ ರಾಷ್ಟ್ರೀಯ , ರಾಜ್ಯಮಟ್ಟದ ಪ್ರಶಸ್ತಿ, ಗೌರವಗಳು ಸಂದಿದ್ದವು.

“ಸಾಮಾಜಿಕ ಕ್ರಾಂತಿಸೂರ್ಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್”ಎಂಬ ಅವರ ಅನುವಾದ ಕೃತಿಗೆ ಕರ್ನಾಟಕ ಸರಕಾರದ ಪ್ರಶಸ್ತಿ ಲಭಿಸಿತ್ತು. “ಧರೆಗವತರಿಸಿದೆ ಸ್ವರ್ಗದ ರ್ಸ್ಪಯು ಸುಂದರ ತಾಯ್ನೆಲವು”ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾಪಠ್ಯದಲ್ಲಿ ದೇಶಭಕ್ತಿಯ ಹಾಡಾಗಿ ಸ್ವೀಕೃತವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!