ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ: ವಾರಾಂತ್ಯದಲ್ಲಿ ಖ್ಯಾತನಾಮರಿಂದ ಉಪನ್ಯಾಸ ಕಾರ್ಯಕ್ರಮ 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಒಂದು ವಾರದ ಹಿಂದೆ ಪ್ರಾರಂಭವಾದ ʼರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬʼ ಕನ್ನಡಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ನವೆಂಬರ್‌ ಮೊದಲ ವಾರಾಂತ್ಯದಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನಾಳೆ (ಶನಿವಾರ) ಬೆಳಗ್ಗೆ 11 ಗಂಟೆಗೆ ಖ್ಯಾತ ಅಂಕಣಕಾರ ಹಾಗೂ ವಿಜ್ಞಾನ ಲೇಖಕರಾದ ರೋಹಿತ್‌ ಚಕ್ರತೀರ್ಥ ಅವರು ʼಬ್ರಿಟಿಷ್ ಪೂರ್ವ ಭಾರತದಲ್ಲಿ ವಿಜ್ಞಾನ- ತಂತ್ರಜ್ಞಾನ ಎಂಬ ವಿಚಾರದ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.‌ ಆ ದಿನ ಸಂಜೆ 6 ಗಂಟೆಗೆ ಖ್ಯಾತ ಲೇಖಕ ಹಾಗೂ ಅಂಕಣಕಾರರಾದ ಡಾ.ಬಾಬು ಕೃಷ್ಣಮೂರ್ತಿ ಅವರಿಂದ ಉಪನ್ಯಾಸವಿರಲಿದೆ. ಈ ಕಾರ್ಯಕ್ರಮಕ್ಕೆ ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ವಿಜಯ ಸಂಕೇಶ್ವರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ನ.6 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಖ್ಯಾತ ಲೇಖಕ ಹಾಗೂ ಅಂಕಣಕಾರರಾದ ದು.ಗು.ಲಕ್ಷ್ಮಣ ಅವರು ʼಸ್ವಾತಂತ್ರ್ಯ ಹೋರಾಟದಲ್ಲಿ ದಕ್ಷಿಣ ಭಾರತʼ ವಿಚಾರದ ಕುರಿತಾಗಿ ಉಪನ್ಯಾಸ ನೀಡಲಿದ್ದಾರೆ. ಆ ದಿನ ಸಂಜೆ 5 ಗಂಟೆಗೆ ಅರಬಿಂದೋ ಸೊಸೈಟಿಯ ʼಅಖಿಲ ಭಾರತ ಪತ್ರಿಕೆʼಯ ಸಂಪಾದಕರಾದ ಪುಟ್ಟು ಕುಲಕರ್ಣಿಯವರ ಉಪನ್ಯಾಸ, ರಾಷ್ಟ್ರೀಯ ಸಾಹಿತ್ಯ, ಪತ್ರಿಕಾ ಕ್ಷೇತ್ರ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಅರಂವಿಂದರ ಕೊಡುಗೆ ಬಗ್ಗೆ ಉಪನ್ಯಾಸವಿರಲಿದೆ.
ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಕೆಂಪೇಗೌಡನಗರದ ಕೇಶವಶಿಲ್ಪ ಸಭಾಂಗಣದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ಉಪನ್ಯಾಸ, ಸಂವಾದ, ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನ.27 ರ ವರೆಗೆ ಮುಂದುವರೆಯಲಿದೆ. ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಇರಲಿದೆ. ಪುಸ್ತಕಗಳಿಗೆ ಶೇ.50ರ ವರೆಗೂ ರಿಯಾಯಿತಿ ಸಿಗಲಿದೆ.
ಪುಸ್ತ ಕಗಳ ಆನ್‌ ಲೈನ್ ಖರೀದಿಗೆ ಈ ಲಿಂಕ್‌ ಬಳಸಿ.
https://www.sahityabooks.com/

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!