ಕೇಸರಿಯಾ ನಂತರ ‘ರಸಿಯಾ’ ಸಾಂಗ್ ರಿಲೀಸ್, ಹೇಗಿದೆ ರಣ್‌ಬೀರ್ ಆಲಿಯಾ ಕೆಮಿಸ್ಟ್ರಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ಬ್ರಹ್ಮಾಸ್ತ್ರ ಬಳಹಾನೇ ಸದ್ದು ಮಾಡಿದೆ. ಅದರಲ್ಲೂ ಸಿನಿಮಾ ಹಾಡುಗಳಿಗೆ ವಿಭಿನ್ನವಾದ ಫ್ಯಾನ್ ಬೇಸ್ ಇದೆ.
ಕೇಸರಿಯಾ ಹಾಡನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದು, ಸಾಮಾಜಿ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಕೇಸರಿಯಾ ಹಾಡಿಗೆ ರೀಲ್ಸ್ ಮಾಡುತ್ತಿದ್ದರು. ನಂತರ ದೇವ ದೇವಾ ಹಾಗೂ ಡ್ಯಾನ್ಸ್ ಕಾ ಭೂತ್ ರಿಲೀಸ್ ಆಗಿತ್ತು.
ಎಲ್ಲ ಹಾಡುಗಳನ್ನು ದಸರಾಗೆ ರಿಲೀಸ್ ಮಾಡುತ್ತೇನೆ ಎಂದು ನಿರ್ದೇಶಕ ಅಯಾನ್ ಮುಖರ್ಜಿ ಹೇಳಿದ್ದರು. ಆದರೆ ಅಭಿಮಾನಿಗಳ ಬೇಡಿಕೆಗೆ ಮಣಿದು ರಸಿಯಾ ಹಾಡನ್ನು ಬಿಡುಗಡೆ ಮಾಡಲಾಗಿದೆ.
ಬಿಡುಗಡೆ ಆದ ಸ್ವಲ್ಪ ಸಮಯಕ್ಕೇ ಹೆಚ್ಚಿನ ವೀವ್ಸ್‌ನ್ನು ಹಾಡು ಪಡೆದುಕೊಂಡಿದೆ. ಜೊತೆಗೆ ಆಲಿಯಾ ಹಾಗೂ ರಣ್‌ಬೀರ್ ಕೆಮಿಸ್ಟ್ರಿ ಬಗ್ಗೆ ಜನ ಕೊಂಡಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!