ರತನ್ ಟಾಟಾ 10,000 ಕೋಟಿ ಆಸ್ತಿಯಲ್ಲಿ ಮುದ್ದಿನ ನಾಯಿಗೂ ಇದೆ ಬಹುದೊಡ್ಡ ಪಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರತನ್ ಟಾಟಾ ನಿಧನ ಬಳಿಕ ಟಾಟಾ ಟ್ರಸ್ಟ್‌ಗೆ ನೋಯಲ್ ಟಾಟ ಚೇರ್ಮೆನ್ ಆಗಿ ಆಯ್ಕೆಯಾಗಿದ್ದಾರೆ.

ಇತ್ತ ರತನ್ ಟಾಟಾ ಆಸ್ತಿ, ಆದಾಯಗಳಿಗೆ ಯಾರು ವಾರಸುದಾರ ಅನ್ನೋ ಕುರಿತು ಮೊದಲೇ ರತನ್ ಟಾಟಾ ಲೆಕ್ಕಾಚಾರ ಹಾಕಿದ್ದಾರೆ. ಈ ಕುರಿತು ವಿಲ್ ಬರೆದಿರುವ ರತನ್ ಟಾಟಾದಲ್ಲಿ 10,000 ಕೋಟಿ ರೂಪಾಯಿ ಆಸ್ತಿಯಲ್ಲಿ ಯಾರೆಗೆಲ್ಲಾ ಪಾಲು ನೀಡಬೇಕು ಅನ್ನೋದನ್ನು ಸೂಚಿಸಿದ್ದಾರೆ. ಪ್ರಮುಖವಾಗಿ ಅವರ ಮುದ್ದಿನ ನಾಯಿಗೂ ಬಹು ದೊಡ್ಡ ಪಾಲನ್ನೇ ಮೀಸಲಿಟ್ಟಿದ್ದಾರೆ.

10,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಸಂಪತ್ತನ್ನು ಹೊಂದಿರುವ ಟಾಟಾ, ತಮ್ಮ ಫೌಂಡೇಶನ್, ಅವರ ಸಹೋದರ ಜಿಮ್ಮಿ ಟಾಟಾ, ಅರ್ಧ ಸಹೋದರಿಯರಾದ ಶಿರೀನ್ ಮತ್ತು ಡಿಯಾನಾ ಜೆಜೀಭಾಯ್ ಅವರ ಮನೆಯ ಅಡುಗೆ ಸಿಬ್ಬಂದಿ ಮತ್ತು ಅವರ ಆಪ್ತ ಇತರರಿಗೆ ಆಸ್ತಿಗಳನ್ನು ಗೊತ್ತುಪಡಿಸಿದ್ದಾರೆ. ಇದರ ಜೊತೆ ಅವರ ಮುದ್ದುನ ನಾಯಿ ಜರ್ಮನ್ ಶೆಫರ್ಡ್ ಟಿಟೋಗೆ ಪಾಲು ಮೀಸಲಿಟ್ಟಿದ್ದಾರೆ.

ಆರು ವರ್ಷಗಳ ಹಿಂದೆ ಟಾಟಾ ದತ್ತು ಪಡೆದ ಟಿಟೊನನ್ನು ಟಾಟಾ ಅವರ ದೀರ್ಘಕಾಲದ ಅಡುಗೆಯವರಾದ ರಾಜನ್ ಶಾ ಅವರು ನೋಡಿಕೊಳ್ಳಲಿದ್ದಾರೆ. ಮೂರು ದಶಕಗಳ ಕಾಲ ಟಾಟಾ ಅವರಿಗೆ ಸೇವೆ ಸಲ್ಲಿಸಿದ ಅವರ ಬಟ್ಲರ್ ಸುಬ್ಬಯ್ಯ ಅವರಿಗೂ ಈ ವಿಲ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.

10,000 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿರುವ ರತನ್ ಟಾಟಾ ತಮ್ಮ ಸಂಪತ್ತನ್ನು ತಮ್ಮ ಫೌಂಡೇಶನ್, ಸಹೋದರ, ಮಲಸಹೋದರಿಯರು, ಮನೆ ಸಿಬ್ಬಂದಿ ಮತ್ತು ಇತರರಿಗೆ ಹಂಚಿದ್ದಾರೆ. ರತನ್ ಟಾಟಾ ಅವರ ಆಸ್ತಿಗಳ ಪೈಕಿ ಮುಂಬೈನ ಆಲಿಬಾಗ್‌ನಲ್ಲಿರುವ 2000 ಚದರ ಅಡಿಯ ಬೀಚ್ ಬಂಗಲೆ, ಜುಹು ತಾರಾ ರಸ್ತೆಯಲ್ಲಿರುವ 2 ಮಹಡಿಗಳ ಕಟ್ಟಡ. 350 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಫಿಕ್ಸೆಡ್ ಡೆಪಾಸಿಟ್ ಸೇರಿದಂತೆ ಇತರ ಹಲವು ಆಸ್ತಿಗಳನ್ನು ಹೊಂದಿದ್ದಾರೆ.

ರತನ್ ಟಾಟಾ ಟಾಟಾ ಸನ್ಸ್‌ನಲ್ಲಿ 0.83% ಪಾಲನ್ನು ಹೊಂದಿದ್ದಾರೆ ಮತ್ತು 7,900 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇನ್ನು 20 ರಿಂದ 30 ದುಬಾರಿ ಹಾಗೂ ಐಷಾರಾಮಿ ಕಾರುಗಳು ರತನ್ ಟಾಟಾ ಬಳಿ ಇವೆ. ರತನ್ ಟಾಟಾ ತಮ್ಮ ಕೊನೆಯ ದಿನಗಳನ್ನು ಕಳೆದ ಕೊಲಾಬದಲ್ಲಿರುವ ಹ್ಯಾಲೆಕೈ ನಿವಾಸ ಕೂಡ ಹಂಚಿದ್ದಾರೆ.

165 ಬಿಲಿಯನ್ ಡಾಲರ್‌ಗಳ ಟಾಟಾ ಗ್ರೂಪ್‌ನ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್‌ನಲ್ಲಿ 0.83% ಪಾಲನ್ನು ಹೊಂದಿರುವ ರತನ್ ಟಾಟಾ ಅವರ ಆಸ್ತಿಗಳನ್ನು ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ (RTEF) ಗೆ ವರ್ಗಾಯಿಸಲಾಗುತ್ತದೆ.

ಡಿಸೆಂಬರ್ 28, 1937 ರಂದು ಜನಿಸಿದ ರತನ್ ಟಾಟಾ ಅವರು 2024 ಅಕ್ಟೋಬರ್ 9 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!