ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದ್ದ ಮೃತದೇಹಗಳನ್ನು ಇಲಿಗಳು ತಿಂದು ಹಾಕಿವೆ.
ಇಲ್ಲಿನ ದೇವಗಾಂವ್ ಕೊತ್ವಾಲಿಯ ಚೇವಾರ ಗ್ರಾಮದಲ್ಲಿ ಮಂಗಳವಾರ ಆಟೋವೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು.ಬಳಿಕ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ವೇಳೆ ಇಲಿಗಳು ಮೃತದೇಹದ ಭಾಗಗಳನ್ನು ಕಚ್ಚಿ ತಿಂದಿವೆ.
ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರು ಮನೆಗೆ ಕೊಂಡೊಯ್ದಿದ್ದಾರೆ. ಮನೆಗೆ ಕೊಂಡೊಯ್ದು ಕೊನೆಯ ಕ್ರಿಯೆ ಮಾಡುವ ವೇಳೆ ಮೃತದೇಹಗಳ ಹೆಬ್ಬೆರಳು, ಕಣ್ಣುಗಳನ್ನು ಇಲಿಗಳು ತಿಂದಿರುವುದು ಗೊತ್ತಾಗಿದೆ. ಇದರಿಂದ ಕೋಪಗೊಂಡ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆರೋಗ್ಯ ಇಲಾಖೆ ನಿರ್ಲಕ್ಷ ವಹಿಸಿದೆ ಎಂದು ಆರೋಪಿಸಿದ್ದಾರೆ.