ಏಕದಿನ ಕ್ರಿಕೆಟ್‌ ಗೆ ಸದ್ಯದಲ್ಲೇ ಹಾರ್ದಿಕ್‌ ಪಾಂಡ್ಯ ನಿವೃತ್ತಿ!.. ಸುಳಿವು ನೀಡಿದ ಮಾಜಿ ಕೋಚ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಲ್ರೌಂಡರ್‌ ಹಾರ್ದಿಕ್ ಪಾಂಡ್ಯ ಸದ್ಯ ಅತ್ಯುತ್ತಮ ಲಯದಲ್ಲಿದ್ದಾರೆ. ಹಲವು ಸಮಯದಿಂದ ಫಿಟ್ನೆಸ್ ಕಳೆದುಕೊಂಡಿದ್ದ ಪಾಂಡ್ಯ  ಸುಮಾರು ಎರಡು ವರ್ಷಗಳ ಕಾಲ ತಂಡದಿಂದ ಹೊರಗುಳಿದರು. ಟಿ.20 ವಿಶ್ವಕಪ್‌ ನಲ್ಲಿ ಪಾಂಡ್ಯಾ ನಿರಾಶಾದಾಯಕ ಪ್ರದರ್ಶನಕ್ಕೆ  ಭಾರೀ ಟೀಕೆ ವ್ಯಕ್ತವಾಗಿತ್ತು. ಆ ಬಳಿಕ ಐಪಿಎಲ್‌ನಲ್ಲಿ ಮೈದಾನಕ್ಕೆ ಮರಳಿದ ಪಾಂಡ್ಯ ಹಳೆ ಖದರ್‌ ನಲ್ಲಿ ಅಬ್ಬರಿಸಿದರು. ಚೊಚ್ಚಲ ನಾಯಕತ್ವ ವಹಿಸಿಕೊಂಡಾಗಲೇ ಐಪಿಎಲ್‌ ಟ್ರೋಫಿ ಗೆದ್ದರು. ಆ ಬಳಿಕ ಇಂಗ್ಲೆಂಡ್‌ ಪ್ರವಾಸದಲ್ಲೂ ಅಧ್ಬುತ ಪ್ರದರ್ಶನ ನೀಡಿದ್ದ ಪಾಂಡ್ಯ, ತಾನೋರ್ವ ವಿಶ್ವಕ್ರಿಕೆಟ್ ನ ಬೆಸ್ಟ್‌ ಆಲ್ರೌಂಡರ್‌ ಎಂಬುದನ್ನು ಸಾಬೀತು ಪಡಿಸಿದ್ದರು. ಎಲ್ಲವೂ ಪಾಂಡ್ಯ ಪರವಾಗಿ ಸಾಗುತ್ತಿವಾಗಲೇ ಭಾರತ ತಂಡದ ಮಾಜಿ ಕೊಚ್‌ ಒಬ್ಬರು ಪಾಂಡ್ಯ ನಿವೃತ್ತಿ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.
ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಪಾಂಡ್ಯ ಭವಿಷ್ಯದ ಬಗ್ಗೆ ದಿಟ್ಟ ಹೇಳಿಕೆ ನೀಡಿದ್ದಾರೆ. 2023ರ  ವಿಶ್ವಕಪ್ ನಂತರ ಅಬ್ಬರದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 50-ಓವರ್‌ಗಳ ಸ್ವರೂಪಕ್ಕೆ ವಿದಾಯ ಹೇಳಬಹುದು ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಇಂಗ್ಲೆಂಡ್ – ಸೌತ್‌ 3ನೇ ಏಕದಿನ ಪಂದ್ಯದ ವೀಕ್ಷಕ ವಿವರಣೆ ನೀಡುವ ವೇಳೆ ಸ್ಕೈ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಶಾಸ್ತ್ರೀ, 2021 ಮತ್ತು 2022 ರ T20 ವಿಶ್ವಕಪ್ ನಡೆಯುವುದರಿಂದ ಹೆಚ್ಚಿನ ಆಟಗಾರರು T20 ಸ್ವರೂಪದ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಾರೆ. ಆಟಗಾರ ಯಾವ ಫಾರ್ಮಾಟ್‌ ಗೆ ಸೂಕ್ತನಾಗುತ್ತಾನೋ ಆ ಸ್ವರೂಪದಲ್ಲಿ ಆಡಲು ಬಯಸುತ್ತಾರೆ. ಹಾರ್ದಿಕ್ ಪಾಂಡ್ಯರನ್ನು ತೆಗೆದುಕೊಳ್ಳಿ. ಅವರು ಹೆಚ್ಚಾಗಿ ಟಿ 20 ಕ್ರಿಕೆಟ್ ಆಡಲು ಬಯಸುತ್ತಾರೆ. ಅಲ್ಲದೆ, ಈ ವಿಚಾರವನ್ನು ಹಾರ್ದಿಕ್‌ ಸಹ ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ಹಾರ್ದಿಕ್ ಮುಂಬರುವ 2023ರ ವಿಶ್ವಕಪ್‌ ಆಡಿ ಆ ಬಳಿಕ ಏಕದಿನ ಕ್ರಿಕೆಟ್‌ ನಿಂದ ನಿವೃತ್ತರಾಗಬಹುದು ಎಂದು ರವಿಶಾಸ್ತ್ರಿ ಪ್ರತಿಪಾದಿಸಿದರು.
ಮುಂದಿನ ವರ್ಷ ಭಾರತದಲ್ಲಿ ವಿಶ್ವಕಪ್ ಇರುವುದರಿಂದ ಅವರು 50 ಓವರ್‌ಗಳ ಕ್ರಿಕೆಟ್ ಆಡಲಿದ್ದಾರೆ. ಅದರ ನಂತರ, ಅವನು ಅಲ್ಲಿಂದ ಹೋಗುವುದನ್ನು ನೀವು ನೋಡಬಹುದು. ಅನೇಕ ಆಟಗಾರರು ಹೀಗೆ ಮಾಡುವುದನ್ನು ನೀವು ನೋಡುತ್ತೀರಿ, ಅವರು  ತಮಗೆ ಸೂಕ್ತವೆನಿಸಿದ ಸ್ವರೂಪವನ್ನು ಮಾತ್ರವೇ ಆಯ್ಕೆ ಮಾಡಲು ಪ್ರಾರಂಭಿಸುತ್ತಾರೆ, ಅವರಿಗೆ ಎಲ್ಲ ಹಕ್ಕಿದೆ, ”ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!