ಕ್ರಿಕೆಟ್‌ನಲ್ಲಿ ʼಹಾಕಿ ಶಾಟ್‌ʼ ಪ್ರಯೋಗಿಸಿದ ಅಶ್ವಿನ್‌; ನೆಟ್ಟಿಗರ ತಮಾಷೆಗೆ ಸರಕಾಯ್ತು ವಿಚಿತ್ರ ಹೊಡೆತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಬುಧವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ತಮ್ಮ ವಿಚಿತ್ರ ಬ್ಯಾಟಿಂಗ್ ಸ್ಟಾಂಡ್‌ ನಿಂದಾಗಿ ಸುದ್ದಿಯಾಗಿದ್ದಾರೆ. ಅವರ ಈ ವಿಚಿತ್ರ ಬ್ಯಾಟಿಂಗ್‌ ವೈಖರನ್ನು ಹಾಸ್ಯಮಾಡುವ ಮಿಮ್ಸ್‌ ಗಳು ಸಾಮಾಜಿಕ ತಾಣಗಳಲ್ಲಿ ಕಚಗುಳಿ ಇಡುತ್ತವೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ರಾಜಸ್ತಾನ ಬೇಗನೆ ಜೋಸ್ ಬಟ್ಲರ್ ಕಳೆದುಕೊಂಡ ಬಳಿಕ ಅಶ್ವಿನ್ ಭಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಇಳಿದರು. ಅತ್ಯುತ್ತಮವಾಗಿಯೇ ಆಡಿದ ಅಶ್ವಿನ್‌ ಕೇವಲ 37 ಎಸೆತಗಳಲ್ಲಿ ತನ್ನ ಚೊಚ್ಚಲ ಐಪಿಎಲ್ ಅರ್ಧಶತಕ ದಾಖಲಿಸಿದರು. ಇದರಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ ಸೇರಿತ್ತು. ಈ ಪಂದ್ಯದಲ್ಲಿ ಅಶ್ವಿನ್‌ ಬ್ಯಾಟಿಂಗ್‌ ವಿಶೇಷವಾಗಿತ್ತು. ಅವರು ಹಲವಾರು ಹೊಸ ಮಾದರಿಯ ಹೊಡೆತಗಳನ್ನು ಹೊಡೆಯುವ ಮೂಲಕ ಗಮನ ಸೆಳೆದರು. ಅದರಲ್ಲೂ ಚೈನಾಮ್ಯಾನ್‌ ಬೌಲರ್‌ ಕುಲ್ದೀಪ್‌ ಯಾದವ್‌ ಬೌಲಿಂಗ್‌ ನಲ್ಲಿ ಅಶ್ವಿನ್‌ ಹೊಡೆಯಲು ಯತ್ನಿಸಿದ ಶಾಟ್‌ ಚಿತ್ರಗಳು ವೈರಲ್‌ ಆಗುತ್ತಿದೆ.

ಹಾಕಿಚೆಂಡನ್ನು ಗೋಲುಪೆಟ್ಟಿಗೆಯೊಳಕ್ಕೆ ಅಟ್ಟುವಾಗ ಆಟಗಾರ ಸ್ಟಿಕ್‌ ಅನ್ನು ನೆಲಮಟ್ಟಕ್ಕೆ ಹಿಡಿದು ಬಗ್ಗಿ ಕೂರುವ ಮಾದರಿಯಲ್ಲಿ ಅಶ್ವಿನ್‌ ಬ್ಯಾಟಿಂಗ್ ನಿಲುವಿನ ಬಗ್ಗೆ ಸಾಮಾಜಿಕ ತಾಣಗಳಲ್ಲಿ ತಮಾಷೆಯ ಚರ್ಚೆಗಳಾಗುತ್ತಿವೆ. ಕ್ರಿಕೆಟ್‌ ಪ್ಲೆಯರ್‌ ಅಶ್ವಿನ್‌ ಹಾಕಿಯನ್ನೂ ಚೆನ್ನಾಗಿ ಆಡುತ್ತಾರೆ ಎಂದು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಅದೇ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ʼಕೇದಾರ್ ಜಾಧವ್ ರ ನೆಲಮಟ್ಟದ ಬೌಲಿಂಗ್‌ಗೆ ಅಶ್ವಿನ್‌ ಬಳಿ ಉತ್ತರವಿದೆ.” ಎಂದು ನೆಟ್ಟಿಗನೊಬ್ಬ ಬರೆದುಕೊಂಡರೆ, ಅಶ್ವಿನ್‌ ಬ್ಯಾಟಿಂಗ್‌ ಭವಿಷ್ಯದಲ್ಲಿ ಹೀಗಿರಲಿದೆ ಎಂದು ಮತ್ತೊಬ್ಬ ಜಾಲತಾಣಿಗ ʼಲಗಾನ್‌ʼ ಪಾತ್ರವೊಂದರ ಚಿತ್ರ ಹಂಚಿಕೊಂಡಿದ್ದಾರೆ.
ಅಶ್ವಿನ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ‘ಔಟ್-ಆಫ್-ದಿ-ಬಾಕ್ಸ್’ ಚಿಂತನೆಗಳಿಂದಾಗಿ ಹಲವು ಬಾರಿ ಚರ್ಚೆಯಲ್ಲಿದ್ದಾರೆ. 2019 ರಲ್ಲಿ, ಜೋಸ್ ಬಟ್ಲರ್ ಅವರನ್ನು ಮಂಕಡ್ ಔಟ್‌ ಮಾಡಿದ ಕಾರಣ ಅವರು ಸುದ್ದಿಯಲ್ಲಿದ್ದರು. ಈ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ ನಲ್ಲೇ ‘ನಿವೃತ್ತರಾದ’ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!