ಅವೆಂಜರ್ಸ್‌ ಭಾರತೀಯ ಪುರಾಣಗಳಿಂದ ಪ್ರೇರಿತವಾಗಿದೆ ಎಂದ ʼರಿವಾಲ್ವರ್‌ ರಾಣಿʼ

ಹೊಸದಿಗಂತ ಡಿಜಿಟಲದ ಡೆಸ್ಕ್:‌
ಹಾಲಿವುಡ್‌ ನ ಜನಪ್ರಿಯ ಸೂಪರ್ ಹೀರೋ ಚಿತ್ರ ʼಎಂವೆಜರ್ಸ್ʼ ಭಾರತೀಯ ಪುರಾಣದಿಂದಲೇ ಪ್ರಭಾವಿತವಾಗಿದೆ ಎಂದು ಬಾಲಿವುಡ್‌ ನ ʼರಿವಾಲ್ವರ್‌ ರಾಣಿʼ ಕಂಗನಾ ರಣಾವತ್‌ ಹೇಳಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ನೀವು ಭಾರತೀಯ ಪೌರಾಣಿಕ ಪಾತ್ರವನ್ನು ಆಯ್ಕೆ ಮಾಡುತ್ತೀರಾ ಅಥವಾ ಹಾಲಿವುಡ್‌ ಸೂಪರ್‌ ಹೀರೋ ಪಾತ್ರವನ್ನು ಆಯ್ಕೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ನಾನು ಖಂಡಿತವಾಗಿಯೂ ಭಾರತೀಯ ಪುರಾಣದ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಹಾಲಿವುಡ್‌ ನಮ್ಮ ಭಾರತೀಯ ಸಾಹಿತ್ಯ, ಪುರಾಣಗಳಿಂದ ಅನೇಕ ವಿಷಯಗಳನ್ನು ಎರವಲು ಪಡೆದುಕೊಂಡಿದೆ. ಅವೆಂಜರ್ಸ್‌ ಸಿನೆಮಾವು ಭಾರತೀಯ ಪೌರಾಣಿಕ ಪಾತ್ರಗಳಿಂದ ಪ್ರೇರಿತವಾಗಿದೆ. ಐರನ್ ಮ್ಯಾನ್‌ ಪಾತ್ರವನ್ನು ನೋಡಿದಾಗಲೆಲ್ಲ ನನಗೆ ಮಹಾಭಾರತದ ಕರ್ಣನ ಕವಚ ನೆನಪಾಗುತ್ತದೆ. ಥೋರ್‌ ತನ್ನ ಸುತ್ತಿಗೆಯನ್ನು ಹಿಡಿಯುವುದು ಹನುಮಂತ ತನ್ನ ಗದೆ ಹಿಡಿಯುವುದಕ್ಕೆ ಹೋಲಿಕೆಯಾದಂತೆ ನನಗೆ ಅನ್ನಿಸುತ್ತದೆ” ಎಂದು ಹೇಳಿದ್ದಾರೆ.

ಕಂಗನಾ ಪ್ರಸ್ತುತ ತಮ್ಮ ಮುಂಬರುವ ಚಿತ್ರ ಧಾಕ್ಕಡ್‌ ನ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಅಭಿನಯದ ಭಾರತದ ಮೊದಲ ಮಹಿಳಾ ಕೇಂದ್ರಿತ ಸ್ಪೈ ಥ್ರಿಲ್ಲರ್‌ ಚಿತ್ರ ಇದಾಗಿದ್ದು ಕಂಗನಾರ ಆಕ್ಷನ್‌ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನೀಶ್ ಘಾಯ್ ನಿರ್ದೇಶಿಸಿದ, ಧಾಕ್ಕಡ್‌ನಲ್ಲಿ ಅರ್ಜುನ್ ರಾಂಪಾಲ್ ಮತ್ತು ದಿವ್ಯಾ ದತ್ತಾ ಕೂಡ ನಟಿಸಿದ್ದಾರೆ. ಚಿತ್ರವು ಮೇ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!