IND VS SA | ಮಂಕಡಿಂಗ್‌ ಅವಕಾಶವಿದ್ದರೂ ಮಾಡದ ಅಶ್ವಿನ್!‌ ಫ್ಯಾನ್ಸ್‌ ಗೆ ಅಚ್ಚರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಡಿಯನ್ ಪ್ರೀಮಿಯರ್ ಲೀಗ್‌ನ ಕೆಲ ಸೀಸನ್‌ಗಳ ಹಿಂದೆ ಜೋಸ್ ಬಟ್ಲರ್ ಅವರನ್ನು ʼಮಂಕಡಿಂಗ್‌ʼ ಔಟ್‌ ಮಾಡುವ  ಮೂಲಕ ವಿಶ್ವಕ್ರಿಕೆಟ್‌ ನಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಅಶ್ವಿನ್, ಇದೀಗ ಮಂಕಡಿಂಗ್‌ ಗೆ ಐಸಿಸಿ ಮಾನ್ಯತೆ ಸಿಕ್ಕದ್ದರೂ ಸೌತ್‌ ಆಫ್ರೀಕಾ ಆಟಗಾರರನ್ನು ಸುಲಭವಾಗಿ ಮಂಕಡಿಂಗ್‌ ಮಾಡುವ ಅವಕಾಶ ಕೈಬಿಟ್ಟು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಟಿ 20 ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ರೋಚಕ ಹಣಹಣಿ ವೇಳೆ ಈ ಘಟನೆ ಸಂಭವಿಸಿದೆ. ದಕ್ಷಿಣ ಆಫ್ರಿಕಾ ಬ್ಯಾಟಿಂಗ್​ ಇನ್ನಿಂಗ್ಸ್​ನ 18ನೇ ಓವರ್​ನಲ್ಲಿ ಈ ಘಟನೆ ನಡೆದಿದೆ. ಆರ್. ಅಶ್ವಿನ್ ಅವರು ಕೊನೆಯ ಎಸೆತ ಎಸೆಯವ ಮುಂಚೆ ನಾನ್ ಸ್ಟ್ರೈಕರ್​​ನಲ್ಲಿದ್ದ ಡೇವಿಡ್ ಮಿಲ್ಲರ್ ಕ್ರೀಸ್ ನಿಂದ ಹೊರಗಿದ್ದರು. ಅದನ್ನು ಗಮನಿಸಿದ ಅಶ್ವಿನ್ ಬಾಲ್ ಎಸೆಯದೆ ಮಿಲ್ಲರ್‌ ರನ್ನೇ ನೋಡಿದರು. ಈ ವೇಳೆ ಅಶ್ವಿನ್​ಗೆ ಮಿಲ್ಲರ್ ರನ್ನು ಮಂಕಡಿಂಗ್ ಮಾಡುವ ಅವಕಾಶವಿತ್ತು. ಆದರೆ, ಮಂಕಡ್‌ ಮಾಡದೆ ಮಿಲ್ಲರ್‌ ಗೆ ಜೀವದಾನ ನೀಡಿದರು. ಈ ವಿಡಿಯೋ ಈಗ ವೈರಲ್‌ ಆಗುತ್ತಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದಾರೆ.
ಇಲ್ಲಿದೆ ನೋಡಿ ಆ ವಿಡಿಯೋ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!