RCB | ‘ಈ ಸಲ ಕಪ್ ನಮ್ದೇ’ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಗರ್ಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಫ್ಯಾನ್ಸ್‌ನ ಕನಸು ಕಡೆಗೂ ನನಸಾಗಿದೆ. ವರ್ಷಗಳಿಂದ ಆರ್‌ಸಿಬಿ ಫ್ಯಾನ್ಸ್ ಕಾಯುತ್ತಿದ್ದ ಘಳಿಗೆ ನಿನ್ನೆ ನಿಜವಾಗಿದ್ದು, ಆರ್‌ಸಿಬಿ ಅಭಿಮಾನಿಗಳು ಅಭಿಮಾನದಿಂದ ತಲೆ ಎತ್ತಿ ಓಡಾಡುತ್ತಿದ್ದಾರೆ.

ಕಳೆದ ೧೭ ಸೀಸನ್‌ಗಳಿಂದ ಕಪ್ ಸಿಗದೇ ನಿರಾಸೆಯಾಗಿದ್ದ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ನಿನ್ನೆ ಖುಷಿಯ ದಿನವಾಗಿದೆ. ಅದರಲ್ಲಿಯೂ ಮಹಿಳಾ ತಂಡದ ಸಾಧನೆಗೆ ಮೆಚ್ಚುಗೆಯ ಮಹಾಪೂರ ವ್ಯಕ್ತವಾಗಿದೆ. ಆರ್‌ಸಿಬಿ ಫ್ರಾಂಚೈಸಿ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದೆ.

ಮತ್ತೊಂದೆಡೆ 2023 ರಲ್ಲಿ ಕಣಕ್ಕಿಳಿದ ಆರ್​ಸಿಬಿ ಮಹಿಳಾ ತಂಡವು ಚೊಚ್ಚಲ ಟೂರ್ನಿಯಲ್ಲೇ ಕಳಪೆ ಪ್ರದರ್ಶನ ನೀಡಿತ್ತು. ಆದರೆ ಈ ಬಾರಿ ಸಾಂಘಿಕ ಪ್ರದರ್ಶನದೊಂದಿಗೆ ಗಮನ ಸೆಳೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲುಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಹವಾ ಹೆಚ್ಚಾಗಿದ್ದು, ಈ ಸಲ ಕಪ್ ನಮ್ದೆ ಅನ್ನೋ ಟ್ಯಾಗ್‌ಲೈನ್‌ಗೆ ಜೀವ ಬಂದಿದೆ. ವಾಟ್ಸಾಪ್, ಇನ್ಸ್‌ಟಾಗ್ರಾಮ್ ಎಲ್ಲೆಡೆ ಆರ್‌ಸಿಬಿ ರಾರಾಜಿಸುತ್ತಿದೆ. ಇನ್ನು ಆರ್‌ಸಿಬಿ ಬಾಯ್ಸ್ ಕಪ್ ಗೆಲ್ಲುವುದನ್ನು ನೋಡೋಕೆ ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!