ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ತಂಡ ಗೆದ್ದರೆ ಹಬ್ಬ ಮಾಡೋ ಫ್ಯಾನ್ಸ್ ಸೋತಾಗಲೂ ತಮ್ಮ ತಂಡಕ್ಕೆ ಚಿಯರ್ ಮಾಡಿ ಮುಂದಿನ ಪಂದ್ಯ ಗೆಲ್ಲಿ ಎಂದು ಹರಸುತ್ತಾರೆ.
ಮನೆ ಮಕ್ಕಳು ಎಷ್ಟೇ ತಪ್ಪು ಮಾಡಿದರೂ ಹೊಟ್ಟೆಗೆ ಹಾಕಿಕೊಳ್ಳೋ ಫ್ಯಾನ್ಸ್‌ಗೆ ಆರ್‌ಸಿಬಿಯನ್ನು ಇನ್ನಷ್ಟು ಇಷ್ಟಪಡೋಕೆ ರೀಸನ್ ಇಲ್ಲಿದೆ..
ಆಟದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ ಸಮಾಜಮುಖಿ ಕೆಲಸಗಳ ಮೂಲಕ ಆರ್‌ಸಿಬಿ ಎಲ್ಲರ ಮನ ಗೆದ್ದಿದೆ. ಅದರಲ್ಲಿಯೂ ಬೆಂಗಳೂರಿನ ಎರಡು ಪ್ರಮುಖ ಕೆರೆಗಳ ಪುನರುಜ್ಜೀವನ ಕಾರ್ಯವನ್ನು ಆರ್‌ಸಿಬಿ ಪೂರ್ಣಗೊಳಿಸಿದೆ.
ಈ ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ ಮತ್ತು ಮೂರನೇ ಕೆರೆಯಲ್ಲಿ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸಿದೆ. ಇಂಡಿಯಾ ಕೇರ್ಸ್ ಫೌಂಡೇಶನ್ ಈ ಕುರಿತು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇಟ್ಟಗಲ್ಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿ ಆರ್‌ಸಿಬಿ 2023ರ ಅಕ್ಟೋಬರ್‌ನಲ್ಲಿ ಇಎಸ್‌ಜಿ ಬದ್ಧತೆಯ ಭಾಗವಾಗಿ ಕೆರೆಗಳ ಸುಧಾರಣಾ ಕಾರ್ಯ ಯೋಜನೆಯನ್ನು ಕೈಗೆತ್ತಿಕೊಂಡಿತ್ತು.