ಏ.6ರಂದು ನಡೆಯುವ ಪಂದ್ಯದಲ್ಲಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ RCB ಪಡೆ: ಲಕ್ ಕೈ ಹಿಡಿಯುತ್ತ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೋ ಗ್ರೀನ್ ಅಭಿಯಾನವು ಈ IPL ನಲ್ಲಿ ಮುಂದುವರಿಯಲಿದೆ. ಈ ಬಾರಿ ಸ್ವಚ್ಛ ಹಾಗೂ ಹಸಿರು ಪರಿಸರವೇ ಮುಖ್ಯ ಗುರಿಯಾಗಿದೆ. ಮೂಲಗಳ ಪ್ರಕಾರ, ಏಪ್ರಿಲ್ 6 ರಂದು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ RCB ಹಸಿರು ಜರ್ಸಿಯಲ್ಲಿ ಆಡಲಿದೆ. ಈ ಸಂಬಂಧ RCB ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವೀಡಿಯೊವನ್ನು ಸಹ ಬಿಡುಗಡೆ ಮಾಡಿದೆ.

ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ಹಸಿರು ಜೆರ್ಸಿಯಲ್ಲಿ ಆಡಲಿದೆ ಎಂಬ ಸುದ್ದಿ ತಿಳಿದ ತಂಡದ ಅಭಿಮಾನಿಗಳು ಈ ಬಾರಿ ಗೆಲ್ಲುವುದು ಖಚಿತ ಎಂದಿದ್ದಾರೆ. ಕಳೆದ ಆವೃತ್ತಿಯಲ್ಲಿ ಹಸಿರು ಜೆರ್ಸಿಯಲ್ಲಿ ಪಂದ್ಯವನ್ನೂ ಆಡಿ ರಾಜಸ್ಥಾನ ವಿರುದ್ಧ 7 ಅಂಕಗಳ ಅಂತರದಿಂದ ಜಯಗಳಿಸಿತ್ತು. ಈ ಬಾರಿಯ ಪಂದ್ಯದಲ್ಲೂ ಆರ್‌ಸಿಬಿ ಗೆಲ್ಲಲಿದೆ ಎಂಬುದು ಅಭಿಮಾನಿಗಳ ನಂಬಿಕೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!