RCB vs RR ಎಲಿಮಿನೇಟರ್ ಪಂದ್ಯ: ಮಳೆ ಬಂದು ರದ್ದಾಗತ್ತಾ ಪಂದ್ಯ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

ಆದರೆ ಇಂದಿನ RCB vs RR ಎಲಿಮಿನೇಟರ್ ಪಂದ್ಯ ವರುಣಾರ್ಭದಿಂದ ವಾಶ್​ಔಟ್​ ಆಗುತ್ತಾ ಎಂಬ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ಪಂದ್ಯ ನಡೆಯುವ ವೇಳೆ ಮಳೆ ಏನಾದ್ರೂ ಬಂದು ಅಡ್ಡಿ ಪಡಿಸುತ್ತ ಎನ್ನುವುದು ಕ್ರಿಕೆಟ್​ ಅಭಿಮಾನಿಗಳಲ್ಲಿ ಇದೆ. ಆದರೆ ಮಳೆಯಿಂದ ಈ ಎಲಿಮಿನೇಟರ್ ಪಂದ್ಯಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ.

ಏಕೆಂದರೆ ಸ್ಟೇಡಿಯಂ ಸುತ್ತ ಮಳೆ ಬೀಳುವ ಮುನ್ಸೂಚನೆ 0 ಪರ್ಸೆಂಟ್​ ಇದೆ. ಬಿಸಿಲಿನ ವಾತಾವರಣವೇ ಅಧಿಕವಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ ಎನ್ನಲಾಗಿದೆ. ಇದರಿಂದಾಗಿ ಅಭಿಮಾನಿಗಳು ಸಮಾಧಾನಪಟ್ಟುಕೊಂಡಿದ್ದು, ಪಂದ್ಯಕ್ಕಾಗಿ ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!