IPL | ಇಂದು ಆರ್‌ಸಿಬಿ VS ಪಿಕೆಬಿಎಸ್‌ ಹೈವೋಲ್ಟೇಜ್‌ ಪಂದ್ಯ! ಯಾವ ತಂಡ ಬಲಿಷ್ಠ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಐಪಿಎಲ್​ನ 34ನೇ ಪಂದ್ಯದಲ್ಲಿ ಇಂದು ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಮತ್ತು ಪಂಜಾಬ್​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ರಜತ್​ ಪಟೀದಾರ್​ ನೇತೃತ್ವದ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ವರೆಗೂ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋಲು ಕಂಡಿದೆ. ರಾಜಸ್ಥಾನ ರಾಯಲ್ಸ್​ ವಿರುದ್ಧ ನಡೆದಿದ್ದ ಕೊನೆಯ ಪಂದ್ಯದಲ್ಲಿ ಬೆಂಗಳೂರು ಪಡೆ 9 ವಿಕೆಟ್​ಗಳಿಂದ ಗೆಲುವು ಸಾಧಿಸಿತ್ತು. ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಶ್ರೇಯಸ್​ ಅಯ್ಯರ್​ ನಾಯಕತ್ವದ ಪಂಜಾಬ್​ ತಂಡ ಈವರೆಗೂ ಆಡಿದ 6 ಪಂದ್ಯಗಳ ಪೈಕಿ 4ರಲ್ಲಿ ಗೆದ್ದು 2ರಲ್ಲಿ ಸೋಲುಂಡಿದೆ. ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ16 ರನ್​ಗಳಿಂದ ಗೆಲುವು ಸಾಧಿಸಿತ್ತು. ಪಾಯಿಂಟ್ಸ್​ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಈವರೆಗೂ 33 ಪಂದ್ಯಗಳಲ್ಲಿ ಎದುರು ಬದುರಾಗಿವೆ. ಇದರಲ್ಲಿ ಆರ್​ಸಿಬಿ 16 ಬಾರಿ ಗೆದ್ದಿದೆ. ಪಂಜಾಬ್​ 17 ಪಂದ್ಯಗಳಲ್ಲಿ ಜಯಿಸಿದೆ. ಈ ತಂಡಗಳ ನಡುವಿನ ಕೊನೆಯ ಐದು ಪಂದ್ಯಗಳಲ್ಲಿ ಆರ್​ಸಿಬಿ ಮೂರರಲ್ಲಿ ಗೆದ್ದರೆ, ಪಂಜಾಬ್​ ಎರಡು ಬಾರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಯಾವ ತಂಡಕ್ಕೆ ಜಯ? ಕಾದುನೋಡಬೇಕಿದೆ..

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!