ಪೇಪರ್ ಕಪ್‌ಗಳು ಕೂಡ ಮಾನವನ ಜೀವಕ್ಕೆ ಸುರಕ್ಷಿತವಲ್ಲ ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಖರಗುರ ಇಂಡಿಯನ್ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರ ತಂಡ ಈ ಸಂಶೋಧನೆ ನಡೆಸಿದೆ. ಈ ಪೇಪರ್ ಕಪ್‌ಗಳಿಗೆ ಪಾಲಿಥಿನ್‌ನಿಂದ ಅಥವಾ ಕೋ ಪಾಲಿಮರ್‌ನಿಂದ ಮಾಡಿರುವ ಹೈಡೋಫೋಬಿಕ್ ಫಿಲ್ಡ್ಗಳನ್ನು ಬಳಸಲಾಗುತ್ತದೆ.
15 ನಿಮಿಷ ಈ ಕಪ್‌ನಲ್ಲಿ 85 ರಿಂದ 90 ಡಿಗ್ರಿ ಉಷ್ಣಾಂಶದ ಬಿಸಿ ಪಾನೀಯ ಹಾಕಿದರೆ ಮೇಲಿನ ಸಣ್ಣ ಲೇಯರ್ ಕರಗಿ ಹೋಗುತ್ತದೆ. 25 ಸಾವಿರ ಮೈಕ್ರಾನ್ ದಪ್ಪದ ಮೈಕ್ರೋಪ್ಲಾಸ್ಟಿಕ್ ಕಣಗಳು 100 ಎಂಎಲ್‌ನಷ್ಟು ದ್ರವ ಪದಾರ್ಥವನ್ನು ಬಿಡುಗಡೆ ಮಾಡುತ್ತದೆ ಎಂದು ಕಂಡು ಹಿಡಿದಿದ್ದಾರೆ.