ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೊನಾ ನಂತರದ ದಿನದಲ್ಲಿ ಹೃದಯಾಘಾತದ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜೊತೆಗೆ ಹತ್ತು ಹಲವು ಕಾಯಿಲೆಗಳು ಮನುಷ್ಯರನ್ನು ಬಿಡದೆ ಕಾಡುತ್ತಿದೆ. ಮನುಷ್ಯನ ದೇಹದಲ್ಲಿ ಪ್ರತಿರೋಧ ಶಕ್ತಿ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಕಾರಣ ಹಲವಿರಬಹುದು. ಬದಲಾದ ಜೀವನ ಶೈಲಿ, ಆಹಾರ ಪದ್ಧತಿಗಳೂ ಕಾರಣವಾಗುತ್ತದೆ. ಮನುಷ್ಯನಿಗೆ ನೀರು ಅತೀ ಅವಶ್ಯಕವಾದದ್ದು. ಬೆಳಗ್ಗೆ ಎದ್ದಕೂಡಲೇ ನೀರು ಕುಡಿಯುವುದು ಆರೊಗ್ಯಕ್ಕೂ ಉತ್ತಮ. ಕೆಲವು ಬಿಸಿ ಬಿಸಿ ನೀರು ಇಷ್ಟಪಡುತ್ತಾರೆ. ದಿನಪೂರ್ತಿ ಬಿಸಿನೀರನ್ನೇ ಕುಡಿಯುವ ಮಂದಿಯೂ ಇದ್ದಾರೆ. ಆದರೆ ಇದೂ ಕೂಡಾ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗುತ್ತದೆ ಎಂದರೆ ಅಚ್ಚರಿಯಾಗದಿರದು.
ಬಿಸಿ ಬಿಸಿ ನೀರು ಕುಡಿಯುವುದರಿಂದ ಅನೇಕ ತೊಂದರೆ ಉಂಟಾಗುತ್ತದೆ. ಬಿಸಿ ಬಿಸಿ ನೀರು ಕುಡಿದರೆ ಬೆವರು ಹೆಚ್ಚು ಹೆಚ್ಚು ಬರುತ್ತದೆ. ಇದರಿಂದಾಗಿ ದೇಹದ ಚರ್ಮದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ತುರಿಕೆ, ಚರ್ಮ ಸಂಬಂಧೀ ಕಾಯಿಲೆಗಳು ಉಂಟಾಗುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ.
ಬಿಸಿ ನೀರು ಕುಡಿಯುವುದರಿಂದ ಕಾಯಿಲೆ ವಾಸಿಯಾಗುವುದಿಲ್ಲ. ದೇಹಕ್ಕೆ ಬೇಕಾದಷ್ಟು ಶುದ್ಧ ನೀರು ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮ. ಹಾಗಂತ ಬಿಸಿ ಬಿಸಿ ನೀರನ್ನು ದಿನಪೂರ್ತಿ ಕುಡಿಯುವುದು ಸರಿಯಲ್ಲ.