ಹೊಸದಿಗಂತ ವರದಿ, ಶಿವಮೊಗ್ಗ:
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರೆ.
ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿಗೆ ಹಣ ಹಾಕುವ ಯೋಜನೆಗೆ
ಉದ್ಘಾಟಿಸಿ ಮಾತನಾಡಿ, ಶಿವಮೊಗ್ಗದಲ್ಲಿ ಐತಿಹಾಸಿಕ ದಿನ. ಚುನಾವಣೆ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆ ಜನರ ಮುಂದೆ ಇಟ್ಟಿದ್ದೆವು. ಐದು ಗ್ಯಾರಂಟಿ ಘೋಷಣೆ ಮಾಡಿದ್ದೆವು. ಪ್ರಣಾಳಿಕೆ ಎಲ್ಲಾ ವಾಗ್ದಾನ ಅಧಿಕಾರಕ್ಕೆ ಬಂದ ತಕ್ಷಣ ಜಾರಿ ಅಂತ ಹೇಳಿರಲಿಲ್ಲ.
ಬೆಲೆ ಗಗನಕ್ಜೆ ಏರಿದೆ. ನಿರುದ್ಯೋಗ ಸಮಸ್ಯೆ ಜಾಸ್ತಿ ಆಗಿದೆ. ಬಡವರು, ದಲಿತರಿಗೆ, ರೈತರಿಗೆ ಕೊಳ್ಳುವ ಶಕ್ತಿ ಜಾಸ್ತಿ ಮಾಡಬೇಕು. ಬೆಲೆ ಏರಿಕೆ ಸಂದರ್ಭದಲ್ಲಿ ಅವರು ಜೀವನ ಸಾಗಿವುಸುವುದು ಕಷ್ಟ. ಅದಕ್ಕಾಗಿ ಐದು ಗ್ಯಾರಂಟಿ ಜಾರಿ ತಕ್ಷಣ ಅಂತ ಹೇಳಿದ್ದೆವು. ಅದೀಗ ಜಾರಿ ಆಗಿದೆ ಎಂದರು.
ಯುವನಿಧಿ ಯಾಕೆ ಜಾರಿ ಆಗಿಲ್ಲ ಎಂದು ಕೇಳುತ್ತಿದ್ದರು. ನಿರುದ್ಯೋಗಿ ಪದವೀಧರರಿಗೆ, ಡಿಪ್ಲೊಮಾ ಮಾಡಿದವರಿಗೆ ಈಗ ಯೋಜನೆ ಜಾರಿ ಮಾಡಿದ್ದೇವೆ. 130 ಕೋಟಿ 28 ಲಕ್ಷ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಸಂಚಾರ ಮಾಡಿದ್ದಾರೆ. ಸಮಾಜದಲ್ಲಿ ಶೇ.50 ಮಹಿಳೆಯರು ಇದ್ದಾರೆ. ಅವರಿಗಾಗಿ ಯೋಜನೆ ಯಾರೂ ಮಾಡಿರಲಿಲ್ಲ ಎಂದರು.
1.65 ಕೋಟಿ ಕುಟುಂಬಕ್ಕೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಅನ್ಬಭಾಗ್ಯ ಕಾರ್ಯಕ್ರಮ, ಹತ್ತು ಕೆಜಿ ಕೊಡ್ತೀವಿ ಅಂದಿದ್ರು. ಕೊಡಲಿಲ್ಲ ಅಂದರು. ಅಕ್ಕಿ ಸಿಗಲಿಲ್ಲ. ಐದು ಕೆಜಿ ಅಕ್ಕಿ ಬದಲಾಗಿ 170 ರೂ. ಕೊಡುತ್ತಾ ಇದ್ದೇವೆ. ಮುಂದೆನೂ ಕೊಡುತ್ತೇವೆ ಎಂದರು.
ಎಲ್ಲರೂ ಸೇರಿ 1.17 ಕೋಟಿ ಯಜಮಾನಿಯರಿಗೆ ತಿಂಗಳಲ್ಲಿ ಎರಡು ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಹಿಂದೆ ಯಾರೂ ಕೊಟ್ಟಿರಲಿಲ್ಲ ಎಂದರು.
ಯುವನಿಧಿ ಜೊತೆಗೆ ಕೌಶಲ್ಯ ತರಬೇತಿ ಕೊಡುತ್ತೇವೆ. ಉದ್ಯೋಗ ಮೇಳ ಮಾಡುತ್ತೇವೆ ಎಂದರು.
ಮಾರುಕಟ್ಟೆ ಎಂತಹ ಉದ್ಯೋಗ ಬೇಡಿಕೆ ಇದೆ ಆ ತರಬೇತಿ ಕೊಡುತ್ತೇವೆ. ಉದ್ದೇಶ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ಯುವಕರು ಭ್ರಮನಿರಸನ ಆಗಬಾರದು. ಆತ್ಮಶಕ್ತಿ ಹೆಚ್ಚು ಮಾಡಬೇಕು ಎಂದರು.
ಯಾವ ಸಮಾಜ ಹಸಿದವರಿಗೆ ಅನ್ನ ಕೊಡಲ್ಲ, ಅಂತಹ ಸಮಾಜದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದ ಹೇಳಿದ್ದರು. ರಾಜೀವ್ ಗಾಂಧಿ ಯುವ ದಿನಾಚರಣೆ ಆರಂಭ ಮಾಡಿದ್ದರು. ಯುವಕರೇ ದೇಶದ ಆಸ್ತಿ ಎಂದು ಹೇಳುತ್ತಿದ್ದರು.
ನಿರುದ್ಯೋಗ ದೇಶದಲ್ಲಿ ಬೆಳಿತಾ ಇದೆ. 5.5 ಇತ್ತು. ಈಗ 10.5ಕ್ಕೆ ಏರಿಕೆ ಆಗಿದೆ. ಯುವಕರು ತಮಗೆ ಭವಿಷ್ಯ ಇಲ್ಲ ಅಂತ ಭ್ರಮನಿರಸನ ಆಗುತ್ತಿದ್ದಾರೆ. ಹಾಗಾಗಿ ಯುವನಿಧಿ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.
ಯೂರೋಪ್ ದೇಶಗಳಲ್ಲಿ ಯೂನಿವರ್ಸಲ್ ಬೇಸಿಕ್ ಇನ್ ಕಮ್ ಎನ್ನುತ್ತಾರೆ. ಬರೀ ಭಾಷಣ ಹೊಡೆದರೆ ಆಗಲ್ಲ. ಸಮಾನರಾಗಬೇಕು ಅಂತ. ರಾಜಕೀಯ ಸ್ವಾತಂತ್ರ್ಯ ಜೊತೆಗೆ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಗಬೇಕು ಎಂದರು.
ರಾಜಕೀಯ ಪ್ರಜಾಪ್ರಭುತ್ವ ಯಶಸ್ಸು ಆಗಲು ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವ ಯಶಸ್ಸು ಆಗಬೇಕು. ಇಲ್ಲವಾದರೆ ಒಂದು ದಿನ ಈ ಜನ ಧ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದರು. ಸಮ ಸಮಾಜದ ನಿರ್ಮಾಣ ಆಗದೇ ಸರ್ವ ಜನಾಂಗದ ಶಾಂತಿ ತೋಟ ನಿರ್ಮಾಣ ಆಗಲ್ಲ. ಸಂವಿಧಾನದ ಆಶಯ ಈಡೇರಿಸುವುದೇ ನಮ್ಮ ಉದ್ದೇಶ ಎಂದರು.