ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಡಿವೋರ್ಸ್ ಪಡೆದ ನಟಿ ನಿವೇದಿತಾ ಗೌಡ ಹಾಗೂ ಸಿಂಗರ್ ಚಂದನ್ ತೆರೆ ಮೇಲೆ ಒಟ್ಟಾಗಿ ಕಾಣಿಸಲಿದ್ದಾರೆ.
ಚಿತ್ರಕ್ಕೆ ಇಟ್ಟಿದ್ದ ‘ಕ್ಯಾಂಡಿ ಕ್ರಶ್’ ಟೈಟಲ್ ಇದೀಗ ಬದಲಾಗಿದೆ. ಪುನೀತ್ ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿದ ಚಿತ್ರದ ತಾತ್ಕಾಲಿಕ ಟೈಟಲ್ ಆಗಿದ್ದ ‘ಕ್ಯಾಂಡಿ ಕ್ರಶ್’ ಇದೀಗ ಮುದ್ದು ರಾಕ್ಷಸಿ ಎಂದು ಬದಲಾಯಿಸಲಾಗಿದೆ.
ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ಅವರು ಈ ಚಿತ್ರವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದಾರೆ.