ಹೊಸದಿಗಂತ ಡಿಜಿಟಲ್ ಡೆಸ್ಕ್:
ಬನಾರಸ್‌ನಲ್ಲಿ ರಸ್ತೆ ಮಧ್ಯದಲ್ಲಿ ವಿದ್ಯುತ್ ತಗುಲಿ ಒದ್ದಾಡುತ್ತಿದ್ದ ಮಗುವಿನ ಪ್ರಾಣವನ್ನು ಇಬ್ಬರು ವೃದ್ಧರು ಉಳಿಸಿದ್ದಾರೆ.
ಚೆಟ್‌ಗಂಜ್‌ನ ಹಬೀಬ್‌ಪುರದ ಜಂಜಿರಾ ಶಾ ಬಾಬಾ ಸಮಾಧಿ ಬಳಿ ನಾಲ್ಕು ವರ್ಷದ ಮಗುವೊಂದು ವಿದ್ಯುತ್ ಸ್ಪರ್ಶಿಸಿ ಒದ್ದಾಡುತ್ತಿತ್ತು, ಅಲ್ಲೇ ಇದ್ದ ವೃದ್ಧರು ಮಗುವಿನ ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಅವರಿಗೂ ವಿದ್ಯುತ್ ಸ್ಪರ್ಶಿಸಿದೆ. ತಕ್ಷಣವೇ ಮಗುವಿಗೆ ಕೋಲು ನೀಡಿ ಮಗುವನ್ನು ನೀರಿನಿಂದ ಹೊರತಂದಿದ್ದಾರೆ.
ಮಳೆಯಾದ ಕಾರಣ ರಸ್ತೆಯಲ್ಲಿ ನೀರು ತುಂಬಿದ್ದು ನಾಲ್ಕು ವರ್ಷದ ಕಾರ್ತಿಕ್ ನೀರಿನಲ್ಲಿ ಆಡುತ್ತಿದ್ದ. ಮನೆಯ ಸಮೀಪದಲ್ಲಿದ್ದ ವಿದ್ಯುತ್ ಕಂಬದಿಂದ ನೀರಿನ ಮೂಲಕ ವಿದ್ಯುತ್ ಪ್ರವಹಿಸಿತ್ತು. ವೃದ್ಧರು ಮಗುವನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ತಕ್ಷಣವೇ ಕರೆ ಮಾಡಿ ವಿದ್ಯುತ್ ಸರಬರಾಜು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೃದ್ಧರ ವಿಡಿಯೋ ವೈರಲ್ ಆಗಿದ್ದು, ರಿಯಲ್ ಹೀರೋಗಳು ಎಂದು ಶ್ಲಾಘಿಸುತ್ತಿದ್ದಾರೆ.