ಬಿಯರ್ ಕೇವಲ ಕುಡಿಯೋಕೆ ಮಾತ್ರವಲ್ಲ. ಬಿಯರ್ ಸೌಂದರ್ಯದ ಪ್ರಯೋಜನಗಳನ್ನು ಸಹ ಹೊಂದಿದೆ. ಇದರಲ್ಲಿರುವ ಆಲ್ಕೋಹಾಲ್ ರಂಧ್ರಗಳನ್ನು ಸ್ವಚ್ಛಗೊಳಿಸಲು ಮತ್ತು ಚರ್ಮವನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ. ಅವಶ್ಯಕತೆಗೆ ಅನುಗುಣವಾಗಿ ಬಿಯರ್ ಬಳಸುವುದು ದೇಹಕ್ಕೆ ಮತ್ತು ಚರ್ಮಕ್ಕೆ ಎರಡಕ್ಕೂ ಒಳ್ಳೆಯದು.
ನಿಮ್ಮ ಮುಖದ ಮೇಲೆ ಕಪ್ಪು ಅಥವಾ ಬಿಳಿ ಚುಕ್ಕೆಗಳಿದ್ದರೆ ಚಿಂತಿಸಬೇಡಿ. 3 ಸ್ಟ್ರಾಬೆರಿ ಸ್ಲೈಸ್‌ಗಳನ್ನು 3-4 ಹನಿ ಬಿಯರ್‌ನೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಅನ್ವಯಿಸಿ ಮತ್ತು ಸುಮಾರು 20 ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಕಪ್ಪು ಬಿಳುಪು ಕಲೆಗಳ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಬಹುದು.
ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, 2 ಚಮಚ ಆಲಿವ್ ಎಣ್ಣೆ, 2 ಚಮಚ ಜೇನುತುಪ್ಪ, 1 ಚಮಚ ನಿಂಬೆ ರಸ ಮತ್ತು ಒಂದು ಹನಿ ಬಿಯರ್ ಅನ್ನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ, ಸುಮಾರು 15 ನಿಮಿಷಗಳ ಕಾಲ ಹಾಗೆ ಬಿಡಿ ಮತ್ತು ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೊಮ್ಮೆ ಇದನ್ನು ಮಾಡಿ.