Friday, June 9, 2023

Latest Posts

ಇನ್ಮುಂದೆ ರೇಸ್‌ಕೋರ್ಸ್‌ ರಸ್ತೆಗೆ ರೆಬೆಲ್‌ ಸ್ಟಾರ್‌ ಅಂಬರೀಶ್‌ ಹೆಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಗೆ ರೆಬೆಲ್‌ ಸ್ಟಾರ್‌ ಅಂಬರೀಶ್‌ (Actor Ambareesh) ಅವರ ಹೆಸರನ್ನು ಅಧಿಕೃತವಾಗಿ ನಾಮಕರಣ ಮಾಡಲಾಗಿದೆ.

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ರೇಸ್‌ಕೋರ್ಸ್ ರಸ್ತೆಯನ್ನು ಉದ್ಘಾಟನೆ ಮಾಡಿದರು. ರೇಸ್‌ಕೋರ್ಸ್ ಇನ್ನು ಮುಂದೆ ಡಾ. ಎಂ.ಎಚ್. ಅಂಬರೀಶ್‌ ರಸ್ತೆ ಎಂದು ಕರೆಯಲ್ಪಡುತ್ತದೆ.

ಈ ವೇಳೆ ಮಾತನಾಡಿದ ಬೊಮ್ಮಾಯಿ , ಅಂಬರೀಶ್‌ ಅವರು ರೇಸ್‌ಕೋರ್ಸ್‌ನಲ್ಲಿ ಬಹಳ ಸಾರಿ ಓಡಾಡಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಅವರ ಹೆಸರನ್ನು ಇಟ್ಟಿದ್ದೇವೆ. ಅಂಬರೀಶ್‌ ಅವರದ್ದು ಅದ್ಭುತವಾದ ಅಭಿನಯ. ಅಂಬರೀಶ್‌ ಅವರಿಗೆ ರಿಯಲ್ ಲೈಫ್ ಹಾಗೂ ರೀಲ್ ಲೈಫ್ ವ್ಯತ್ಯಾಸ ಇಲ್ಲ. ನೇರವಾಗಿ ಮಾತನಾಡುವ ಸ್ವಭಾವ ಅಂಬಿ ಅವರದ್ದು. ಟೆನ್ನಿಸ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು, ಅಲ್ಲದೆ, ಕಾವೇರಿ ವಿಚಾರಕ್ಕೆ ಬಂದಾಗ ಅವರು ಗುಡುಗಿದ್ದರು. ಅಧಿಕಾರದ ಹಿಂದೆ ಅವರು ಹೋದವರಲ್ಲ. ಅವರ ಹಿಂದೆ ಅಧಿಕಾರ ಬಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್‌ಕುಮಾರ್‌, ಸುಮಲತಾ ಅಂಬರೀಶ್‌, ಅಭಿಷೇಕ್ ಅಂಬರೀಶ್‌, ಕಂದಾಯ ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್‌, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!