ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಡುಕೋರರು ಸಿರಿಯಾ ರಾಜಧಾನಿ ಡಮಾಸ್ಕಸ್ ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ದೇಶವನ್ನು ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಈ ಕುರಿತು ‘ಅಸೋಸಿಯೇಟ್ ಪ್ರೆಸ್’ ಜೊತೆ ಮಾತನಾಡಿದ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಾಮಿ ಅಬ್ದುಲ್ ರೆಹಮಾನ್, ‘ಅಸ್ಸಾದ್ ಅವರು ಇಂದು ಮುಂಜಾನೆ ವಿಮಾನದ ಮೂಲಕ ತೆರಳಿದ್ದಾರೆ’ ಎಂದು ಹೇಳಿದರು.
ಅಸ್ಸಾದ್ ದೇಶದಿಂದ ಪಲಾಯನಗೈದಿದ್ದಾರೆ ಎಂಬ ವದಂತಿಯನ್ನು ಸರ್ಕಾರ ನಿರಾಕರಿಸಿದೆ. ಅಸ್ಸಾದ್ ರಷ್ಯಾ ಅಥವಾ ಟೆಹರಾನ್‌ಗೆ ಹೋಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಬಶರ್ ಅಲ್-ಅಸ್ಸಾದ್ ರಷ್ಯಾದ ಸರಕು ವಿಮಾನದಲ್ಲಿ ಸಿರಿಯಾವನ್ನು ತೊರೆದಿದ್ದಾರೆ ಮತ್ತು ಅಸ್ಸಾದ್ ಅವರ ವಿಮಾನವು ರಾಡಾರ್‌ನಿಂದ ಕಾಣೆಯಾಗಿದೆ.