ಸುಲಭವಾಗಿ ಮಾಡಿ ಚಿಕನ್ ಬಿರಿಯಾನಿ, ರುಚಿ ಬಗ್ಗೆ ಡೌಟೇ ಇಲ್ಲ!

ಸಾಮಾಗ್ರಿಗಳು
ಚಿಕನ್
ಅಕ್ಕಿ
ಚಕ್ಕೆ
ಲವಂಗ
ಮರಾಠಿ ಮೊಗ್ಗು
ಸೋಂಪು ಕಾಳು
ಏಲಕ್ಕಿ
ಪಲಾವ್ ಎಲೆ
ಶುಂಠಿ ಬೆಳ್ಳುಳ್ಳಿ
ಈರುಳ್ಳಿ
ಟೊಮ್ಯಾಟೊ
ಕೊತ್ತಂಬರಿ ಸೊಪ್ಪು
ಪುದೀನ
ಅರಿಶಿಣ
ಎಣ್ಣೆ
ಉಪ್ಪು
ಹಸಿಮೆಣಸು
ಬಿರಿಯಾನಿ ಪುಡಿ

ಮಾಡುವ ವಿಧಾನ

ಮೊದಲು ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಮಸಾಲಾ ಪದಾರ್ಥ, ಸ್ವಲ್ಪ ಕಾಯಿ, ಕೊತ್ತಂಬರಿ, ಶುಂಠಿ-ಬೆಳ್ಳುಳ್ಳಿ ಹಾಕಿ ರುಬ್ಬಿ

ನಂತರ ಒಗ್ಗರಣೆಗೆ ಈರುಳ್ಳಿ, ಪುದೀನ, ಹಸಿಮೆಣಸು, ಹಾಕಿ ಬಾಡಿಸಿ.

ನಂತರ ಇದಕ್ಕೆ ಚಿಕನ್ ಹಾಕಿ ಚೆನ್ನಾಗಿ ಬೇಯಿಸಿ

ಈಗ ರುಬ್ಬಿದ ಮಸಾಲಾ ಹಾಕಿ ಬಾಡಿಸಿ, ಕಾರದಪುಡಿ, ಬಿರಿಯಾನಿ ಪುಡಿ ಹಾಕಿ.
ನಂತರ ಅಕ್ಕಿ ಹಾಕಿ ಬಾಡಿಸಿ

ತಕ್ಕಷ್ಟು ಉಪ್ಪು ಹಾಕಿ, ನಂತರ ನೀರು ಹಾಕಿ ಕುದಿಸಿ

ಮೂರು ವಿಶಲ್ ನಂತರ ಕುಕ್ಕರ್ ಆಫ್ ಮಾಡಿ, ಬಿಸಿ ಬಿಸಿ ಸವಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!