ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗ್ಗಿನ ತಿಂಡಿಗೆ ವೆರೈಟಿ ಆಗಿ ಏನಾದರೂ ಮಾಡಬೇಕಲ್ಲ ಅಂತ ಅನ್ಕೊಂಡಿರೋರಿಗೆ ಇಲ್ಲಿದೆ ವೆರೈಟಿಯಾದ ಪೆಪ್ಪರ್ ರೈಸ್ ಟ್ರೈ ಮಾಡಿ. ನಿಮ್ಮ ಮನೆಮಂದಿ ಜೊತೆ ಕೂತು ಸವಿಯಿರಿ…
ಬೇಕಾದ ಪದಾರ್ಥಗಳು:
ಕಾಳು ಮೆಣಸು- 1 ಚಮಚ
ಜೀರಿಗೆ- 1 ಚಮಚ
ಕರಿಬೇವು- ಅರ್ಧ
ತುಪ್ಪ- 2 ಚಮಚ
ಸಾಸಿವೆ- ಸ್ವಲ್ಪ
ಉದ್ದಿನ ಬೇಳೆ- ಸ್ವಲ್ಪ
ಕಡಲೆಬೇಳೆ-ಸ್ವಲ್ಪ
ಕಡಲೆಕಾಯಿ ಬೀಜ-ಸ್ವಲ್ಪ
ಗೋಡಂಬಿ-ಸ್ವಲ್ಪ
ಬೆಳ್ಳುಳ್ಳಿ- ೪
ಇಂಗು- ಸ್ವಲ್ಪ
ಹಸಿಮೆಣಸಿನ ಕಾಯಿ- 1-2
ಬ್ಯಾಡಗಿ ಮೆಣಸಿನಕಾಯಿ- 1
ಈರುಳ್ಳಿ- 1
ಅನ್ನ- ಒಂದು ಕಪ್
ಉಪ್ಪು- ರುಚಿಗೆ
ನಿಂಬೆರಸ – ಅರ್ಧ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಪೆಪ್ಪರ್ ರೈಸ್ ಮಾಡುವ ವಿಧಾನ:
ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಮೆಣಸು, ಜೀರಿಗೆ ಮತ್ತು ಕರಿಬೇವಿನ ಸೊಪ್ಪು ಹಾಕಿ ಕೆಂಪಗೆ ಹುರಿಯಿರಿ. ತಣ್ಣಗಾದ ನಂತರ ಮಿಕ್ಸಿಂಗ್ ಬೌಲ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ.
ನಂತರ ಪ್ಯಾನ್ ಅನ್ನು ಮತ್ತೆ ಒಲೆಯ ಮೇಲೆ ಇರಿಸಿ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ. ಕಾದ ನಂತರ ಸಾಸಿವೆ, ಉದ್ದಿನಬೇಳೆ, ಕಡಲೆ, ಕಡಲೆಬೀಜ ಮತ್ತು ಗೋಡಂಬಿ ಸೇರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಫ್ರೈ ಮಾಡಿ.
ನಂತರ ಬೆಳ್ಳುಳ್ಳಿ, ಇಂಗು, ಹಸಿಮೆಣಸಿನಕಾಯಿ ಮತ್ತು ಬ್ಯಾಡಗಿ ಮೆಣಸಿನಕಾಯಿಯನ್ನು ಹಾಕಿ ಎಲ್ಲವನ್ನೂ ಉರಿದುಕೊಳ್ಳಿ. ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ. ಈಗ ಕಾಲು ಮೆಣಸು ಮಿಶ್ರಣ ಮಾಡಿ ರುಚಿಗೆ ಉಪ್ಪು ಸೇರಿಸಿ ಮತ್ತು ಬೆರೆಸಿ. ನಂತರ ಅಕ್ಕಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದೀಗ ರುಚಿಯಾದ ಪೆಪ್ಪರ್ ರೈಸ್ ಮನೆಯವರೊಂದಿಗೆ ಸವಿಯಲು ಸಿದ್ದ.