ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊರಾಕೊದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕಂಪಕ್ಕೆ ಈವರೆಗೆ 2000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು ಕೂಡ ಮುಂದುವರೆದಿದೆ.
ಭಾನುವಾರ ಹೊರಬಿದ್ದ ಅಧಿಕೃತ ಮಾಹಿತಿಯ ಪ್ರಕಾರ, ಉತ್ತರ ಆಫ್ರಿಕಾ ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪ ಇದಾಗಿದ್ದು, 2,122 ಸಾವುಗಳು ಮತ್ತು 2,400 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಜನಪ್ರಿಯ ಪ್ರವಾಸಿ ತಾಣವಾದ ಮರಕೇಶ್‌ನಲ್ಲಿ ಶುಕ್ರವಾರ 6.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮತ್ತೆ ಅದೇ ಪ್ರದೇಶದಲ್ಲಿ ಭಾನುವಾರ 4.5 ತೀವ್ರತೆಯ ಕಂಪನ ಸಂಭವಿಸಿದೆ.
ಇದರಿಂದಾಗಿ ಮರಕೇಶ್‌ನಿಂದ 60 ಕಿಲೋಮೀಟರ್ (37 ಮೈಲುಗಳು) ದೂರದಲ್ಲಿರುವ ತಾಫೆಘಗ್ಟೆ ಎಂಬ ಪರ್ವತದ ಹಳ್ಳಿಯಲ್ಲಿನ ಪ್ರತಿಯೊಂದು ಕಟ್ಟಡವೂ ನಾಶವಾಗಿದೆ.
ಸ್ಥಳದಲ್ಲಿ ಬದುಕುಳಿದ ಮತ್ತು ಮೃತಪಟ್ಟವರ ದೇಹಗಳಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.