ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಶುಂಠಿ
ಬೆಳ್ಳುಳ್ಳಿ
ಚಕ್ಕೆ
ಲವಂಗ
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ರಾಜ್ಮಾ ಪೌಡರ್( ಇದ್ದರೆ)
ಉಪ್ಪು
ಎಣ್ಣೆ
ರಾಜ್ಮಾ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ ಹಾಕಿ ರುಬ್ಬಿ
ನಂತರ ಕುಕ್ಕರ್ಗೆ ಎಣ್ಣೆ ಹಾಗೂ ಮಸಾಲಾ ಪೇಸ್ಟ್ ಹಾಕಿ ಬಾಡಿಸಿ
ಇದು ಹಸಿ ವಾಸನೆ ಹೋದ ನಂತರ ಇದಕ್ಕೆ ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ ಹಾಕಿ
ನಂತರ ಕಾಳು ಹಾಕಿ
ಕೊತ್ತಂಬರಿ ಸೊಪ್ಪು ಹಾಗೂ ನೀರು ಹಾಕಿ ನಾಲ್ಕು ವಿಶಲ್ ಕೂಗಿಸಿದ್ರೆ ರಾಜ್ಮಾ ರೆಡಿ