ಸರ್ಕಾರಿ ನೌಕರರಿಗೆ ಇನ್ಮುಂದೆ ಕೆಂಪು-ಹಳದಿ ಬಣ್ಣದ ಐಡಿ ಕಾರ್ಡ್ ಟ್ಯಾಗ್ ಕಡ್ಡಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರಿ ನೌಕರರು ಇನ್ಮುಂದೆ ಕೆಂಪು-ಹಳದಿ ಬಣ್ಣದ ಐಡಿ ಕಾರ್ಡ್ ಟ್ಯಾಗ್ ಹಾಕುವಂತೆ ಸರ್ಕಾರ ಆದೇಶಿಸಿದೆ.

ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಟ್ಯಾಗ್ ಹಾಕಿಕೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ವಿಭಾಗದ ಅಧೀನ ಕಾರ್ಯದರ್ಶಿ ಸಂದೀಪ್‌ ಬಿ.ಕೆ ಆದೇಶಿಸಿದ್ದಾರೆ.

ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಇಟ್ಟು 50 ವರ್ಷಗಳಾದ ಹಿನ್ನಲೆಯಲ್ಲಿ ಸರ್ಕಾರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕರ್ನಾಟಕ ಅಭಿಯಾನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಐಡಿ ಕಾರ್ಡ್ ಟ್ಯಾಗ್ ಅನ್ನು ಕೆಂಪು-ಹಳದಿ ಟ್ಯಾಗ್ ಬಳಸುವಂತೆ ಆದೇಶ ಹೊರಡಿಸಲಾಗಿದೆ.

ಸರ್ಕಾರದ ಎಲ್ಲಾ ನೌಕರರು, ನಿಗಮ,ಮಂಡಳಿಗಳ, ನಿರ್ದೇಶಾನಲಯ, ಅರೆ ಸರ್ಕಾರಿ ನೌಕರರು ತಮ್ಮ ಇಲಾಖೆ ಐಡಿ ಕಾರ್ಡ್‌ಗೆ ಹೊಂದುವಂತೆ ಟ್ಯಾಗ್ ನೀಡಲು ಸಂಬಂಧಿಸಿದ ಇಲಾಖೆಗಳು ಕ್ರಮವಹಿಸುವಂತೆ ಸೂಚಿಸಲಾಗಿದೆ.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!