ಮನುಷ್ಯನ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದರೆ, ಕೀಲು ನೋವುಗಳು ಉಂಟಾಗಬಹುದು. ವಿಶೇಷವಾಗಿ ಕೀಲುಗಳಲ್ಲಿ, ಯೂರಿಕ್ ಆಮ್ಲದ ಹರಳುಗಳು ಅಥವಾ ಕ್ರಿಸ್ಟಲ್ ರೂಪಗೊಂಡು ತೀವ್ರ ನೋವನ್ನು ಉಂಟುಮಾಡುತ್ತವೆ. ಇದನ್ನು ಸಂಧಿವಾತ ಎಂದೂ ಕರೆಯುತ್ತಾರೆ. ಜೊತೆಗೆ ಈ ಯೂರಿಕ್ ಆಮ್ಲವು ಮೂತ್ರಪಿಂಡದ ಕಲ್ಲುಗಳ ರಚನೆ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗಬಹುದು. ಯೂರಿಕ್ ಆಮ್ಲ ಹೆಚ್ಚಿರುವ ಸಮಸ್ಯೆ ಹೊಂದಿದ್ದರೆ ಈ ಪದಾರ್ಥಗಳ ಸೇವನೆ ಕಡಿಮೆ ಮಾಡಿ..
ಸಮುದ್ರಾಹಾರ: ಸಾರ್ಡಿನ್, ಸೀಗಡಿ ಮತ್ತು ಏಡಿಗಳಂತಹ ಸಮುದ್ರಾಹಾರಗಳು ಪ್ಯೂರಿನ್ಗಳಿಂದ ಸಮೃದ್ಧವಾಗಿವೆ. ಅವು ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತವೆ. ಆದ್ದರಿಂದ ಇವುಗಳನ್ನು ತಿನ್ನದಿರುವುದು ಒಳ್ಳೆಯದು.
ತಂಪು ಪಾನೀಯಗಳು: ಸಾಮಾನ್ಯವಾಗಿ ತಂಪು ಪಾನೀಯಗಳಲ್ಲಿ ಪ್ಯೂರಿನ್ ಗಳು ಕಡಿಮೆ ಇರುತ್ತವೆ. ಅವುಗಳಲ್ಲಿ ಫ್ರಕ್ಟೋಸ್ ಎಂಬ ಸಕ್ಕರೆ ಅಧಿಕವಾಗಿರುತ್ತದೆ. ಇದು ದೇಹದಲ್ಲಿ ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತದೆ.
ಬೇಳೆ ಕಾಳುಗಳು: ದ್ವಿದಳ ಧಾನ್ಯಗಳು ಪ್ರೋಟೀನ್ ಹೊಂದಿರುವ ಆರೋಗ್ಯಕರ ಆಹಾರವಾಗಿದ್ದರೂ. ಪ್ರೋಟೀನ್ ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತದೆ ಆದ್ದರಿಂದ ಬೇಳೆ ಕಾಳುಗಳನ್ನು ಸಹ ಕಡಿಮೆ ತಿನ್ನಬೇಕು.
ಮದ್ಯಪಾನ: ನಿಮಗೆ ಯೂರಿಕ್ ಆಸಿಡ್ ಸಮಸ್ಯೆ ಇದ್ದರೆ ಮದ್ಯಪಾನ ಮಾಡಬೇಡಿ. ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುವಲ್ಲಿ ಆಲ್ಕೋಹಾಲ್ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಆಲ್ಕೋಹಾಲ್ ಮೂತ್ರಪಿಂಡಗಳು ಯೂರಿಕ್ ಆಮ್ಲವನ್ನು ಫಿಲ್ಟರ್ ಮಾಡುವುದನ್ನು ತಡೆಯುತ್ತದೆ.
ತರಕಾರಿಗಳು: ಪಾಲಕ್, ಎಲೆಕೋಸು ಮತ್ತು ಅಣಬೆಗಳಂತಹ ತರಕಾರಿಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಯೂರಿಕ್ ಆಮ್ಲ ಹೆಚ್ಚಿರುವವರು ಈ ತರಕಾರಿಗಳನ್ನು ಕಡಿಮೆ ತಿನ್ನಬೇಕು.
ಮಾಂಸ: ಮಾಂಸಾಹಾರದಲ್ಲಿ ಯೂರಿಕ್ ಆಮ್ಲವನ್ನು ಹೆಚ್ಚಿಸುವ ಪ್ಯೂರಿನ್ ಗಳು ಸಮೃದ್ಧವಾಗಿವೆ. ಅದಕ್ಕಾಗಿಯೇ ಯೂರಿಕ್ ಆಸಿಡ್ ಸಮಸ್ಯೆ ಇರುವವರು ಮಾಂಸಾಹಾರದಿಂದ ದೂರವಿರುವುದು ಉತ್ತಮ.