April 5, 2026
Sunday, April 5, 2026
spot_img

‘ರೀಲ್’ ಲೈಫಿನ ವಿಲನ್ ಅಟ್ಟಹಾಸಕ್ಕೆ ಬ್ರೇಕ್ ಬೀಳ್ಬೇಕು: ಟ್ರೆಂಡ್ ಆಗ್ತಿರೋ ‘Bad is Good’ ಬಗ್ಗೆ ಯೋಗಿ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದಿನ ಸಿನಿಮಾಗಳ ಕಥಾ ನಿರೂಪಣೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಅಪರಾಧಿಗಳು, ಡಕಾಯಿತರು ಮತ್ತು ಸಮಾಜವಿರೋಧಿ ಪಾತ್ರಗಳನ್ನು ಹೀರೋಗಳಂತೆ ತೋರಿಸುವ ಪ್ರವೃತ್ತಿ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ. ಇತ್ತೀಚಿನ ಚಿತ್ರಗಳಲ್ಲಿ ಹಿಂಸೆ ಮತ್ತು ಕಾನೂನು ಉಲ್ಲಂಘನೆಗೆ ಗ್ಲಾಮರ್ ಟಚ್ ನೀಡಲಾಗುತ್ತಿರುವುದು ಸಮಾಜಕ್ಕೆ ಸರಿಯಾದ ಸಂದೇಶವಲ್ಲ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಒಂದು ಕಾಲದಲ್ಲಿ ಸಿನಿಮಾಗಳು ಒಳ್ಳೆಯ ಮೌಲ್ಯಗಳನ್ನು ಸಾರುವ ಸಾಧನವಾಗಿದ್ದವು. ಸಮಾಜಕ್ಕೆ ಮಾದರಿಯಾದ ವ್ಯಕ್ತಿತ್ವಗಳನ್ನು ನಾಯಕರೆಂದು ತೋರಿಸಲಾಗುತ್ತಿತ್ತು. ಆದರೆ ಈಗ ಕೆಲ ಚಿತ್ರಗಳಲ್ಲಿ ಅಪರಾಧವನ್ನೇ ಶೈಲಿಯಾಗಿ, ವಿಲನ್‌ಗಳನ್ನೇ ಮಾಸ್ ಹೀರೋಗಳಂತೆ ಬಿಂಬಿಸುವ ಟ್ರೆಂಡ್ ಹೆಚ್ಚುತ್ತಿದೆ ಎಂದು ಯೋಗಿ ಅಭಿಪ್ರಾಯಪಟ್ಟರು. ಇದರಿಂದ ಯುವಕರು ತಪ್ಪು ಮಾರ್ಗವನ್ನು ಆದರ್ಶವೆಂದು ಭಾವಿಸುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಚಿತ್ರರಂಗದ ಸೃಜನಶೀಲತೆಯು ಕೇವಲ ಮನರಂಜನೆಗೆ ಸೀಮಿತವಾಗಬಾರದು, ಅದು ಸಮಾಜದ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ರಾಷ್ಟ್ರಭಕ್ತಿ, ಸಂಸ್ಕೃತಿ ಮತ್ತು ಸಕಾರಾತ್ಮಕ ಸಂದೇಶಗಳನ್ನು ಒಳಗೊಂಡ ಕಥೆಗಳು ಹೆಚ್ಚಾಗಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದರು.

ಸಿನಿಮಾ ಎಂಬುದು ಸಮಾಜದ ಕನ್ನಡಿ. ಆದ್ದರಿಂದ ಜನರಿಗೆ ಸ್ಪೂರ್ತಿ ನೀಡುವ ಕಥೆಗಳೇ ಹೆಚ್ಚು ಬರಬೇಕು, ಹಿಂಸೆ ಮತ್ತು ಅಪರಾಧವನ್ನು ಮಹಿಮೆಪಡಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂಬುದು ಯೋಗಿ ಆದಿತ್ಯನಾಥ್ ಅವರ ಸಂದೇಶವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !