ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಪಾಲಾಗಿದ್ದ ‘ಬಿಗ್ ಬಾಸ್’ ಖ್ಯಾತಿಯ ರಜತ್, ವಿನಯ್ ಗೌಡ ಇಂದು ಜೈಲಿನಿಂದ ರಿಲೀಸ್ ಆಗಿದ್ದಾರೆ.
ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ರಜತ್ ಮತ್ತು ವಿನಯ್‌ಗೆ ನಿನ್ನೆ (ಮಾ.28) 24ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಪೊಲೀಸರ ಕೈಗೆ ಬೇಲ್ ಪ್ರತಿ ತಡವಾಗಿ ಸಿಕ್ಕ ಹಿನ್ನೆಲೆ ಇಂದು ರಜತ್ ಹಾಗೂ ವಿನಯ್ ಜೈಲಿನಿಂದ ಇಂದು ರಿಲೀಸ್ ಆಗಿದ್ದಾರೆ.
ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ರಜತ್, ವಿನಯ್‌ರನ್ನು ಬಂಧಿಸಲಾಗಿತ್ತು. ಮಾ.26ರಿಂದ ಮಾ.28ರವರೆಗೆ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಆದೇಶ ನೀಡಿತ್ತು. ನಿನ್ನೆ ಇಬ್ಬರಿಗೂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.