ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ‘ಬಿಗ್ ಬಾಸ್’ ಖ್ಯಾತಿಯ ಸ್ಪರ್ಧಿ ವಿನಯ್ ಗೌಡ ವಿರುದ್ಧ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಹಿನ್ನೆಲೆ ವಿನಯ್ ಪ್ರತಿಕ್ರಿಯಿಸಿ, ಫಿಲ್ಮ್ ಶೂಟಿಂಗ್‌ಗೆ ಮಚ್ಚು ಬಳಸಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.
ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಆರ್ಮ್ಸ್ ಆಕ್ಟ್ ಅಡಿ ವಿನಯ್ ಗೌಡ ವಿರುದ್ದ ಕೇಸ್ ದಾಖಲಾಗಿದೆ. ಈ ಹಿನ್ನೆಲೆ ವಿಚಾರಣೆಗೆ ಕರೆಯಲಾಗಿತ್ತು. ಆದರೆ ಬಸವೇಶ್ವರ ನಗರದಲ್ಲಿ ಆಗಿರೋ ಕೇಸ್‌ಗೆ ಆರ್‌ಆರ್ ನಗರದ ಪೊಲೀಸ್ ಠಾಣೆಯಲ್ಲಿ ಉತ್ತರ ನೀಡಿದ್ದಾರೆ. ಫಿಲ್ಮ್ ಶೂಟಿಂಗ್‌ಗಾಗಿ ಮಚ್ಚು ಬಳಸಿ ಎಂದಿದ್ದಾರೆ. ಆದರೆ ಕೇಸ್ ದಾಖಲಾಗಿರೋ ಬಸವೇಶ್ವರ ಪೊಲೀಸ್ ಠಾಣೆಗೆ ಹಾಜರಾಗುವಂತೆ ವಿನಯ್‌ಗೆ ಸೂಚಿಸಲಾಗಿದೆ.
ನಾನು ‘ಪುಷ್ಪ’ ಚಿತ್ರದಲ್ಲಿ ಪಾತ್ರ, ರಜತ್ ‘ಕರಿಯ’ ಸಿನಿಮಾದಲ್ಲಿನ ದರ್ಶನ್ ಪಾತ್ರದ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಇದರ ಟಿವಿ ಶೂಟಿಂಗ್ ಮಾಡುತ್ತಿರೋದಾಗಿ ಪತ್ರದಲ್ಲಿ ವಿನಯ್ ತಿಳಿಸಿದ್ದಾರೆ. ಇನ್ನೂ ವಿನಯ್ ಶೇರ್ ಮಾಡಿರುವ ರೀಲ್‌ನಲ್ಲಿ ಓರಿಜಿನಲ್ ಮಚ್ಚು ಬಳಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ರಜತ್ ಮತ್ತು ವಿನಯ್‌ಗೆ ಮಾಡಿರುವ ರೀಲ್ಸ್‌ನಿಂದ ಸಂಕಷ್ಟ ಎದುರಾಗಿದೆ.