ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಚ್ಚು ಹಿಡಿದ ರೀಲ್ಸ್ ಪ್ರಕರಣದಲ್ಲಿ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ಅವರು 2ನೇ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿದ್ದಾರೆ.
ರೀಲ್ಸ್‌ನಲ್ಲಿ ಬಳಸಿದ್ದ ಮಚ್ಚು ಎಲ್ಲಿ ಹೋಯ್ತು ಅನ್ನೋ ಸ್ಪಷ್ಟ ಮಾಹಿತಿ ಇನ್ನೂ ಪೊಲೀಸರಿಗೆ ಲಭ್ಯವಾಗಿಲ್ಲ. ಹೀಗಾಗಿ ಅಸಲಿ ಮಚ್ಚಿನ ಸಂಬಂಧ ಪೊಲೀಸರ ತನಿಖೆ ಮುಂದುವರಿದಿದೆ. ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ರಜತ್ ಕಿಶನ್ ಅವರು ಇಂದು ಪೊಲೀಸ್ ಠಾಣೆಗೆ ಹಾಜರಾಗಿದ್ದರು.
ರೀಲ್ಸ್ ಕೇಸ್‌ನಲ್ಲಿ ಈಗಾಗಲೇ ರಜತ್ ಅವರು ಒಮ್ಮೆ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ನಂತರ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು.
ಈ ವೇಳೆ ಯಾಲಯ ಪ್ರತಿ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಿತ್ತು. ಆದ್ರೆ ರಜತ್ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿ ರಜತ್ ವಿರುದ್ಧ ವಾರೆಂಟ್ ಹೊರಡಿಸಿತ್ತು.ಈ ರೀಲ್ಸ್ ಪ್ರಕರಣದಲ್ಲಿ ಆರೋಪಿ ರಜತ್‌ಗೆ ಮಾತ್ರ ವಾರೆಂಟ್ ಇದೆ. ಇತ್ತ ವಿನಯ್‌ಗೆ ವಾರೆಂಟ್ ಇಲ್ಲ. ಹೀಗಾಗಿ ವಿನಯ್ ಗೌಡ ಅವರಿಗೆ ಇಂದು ರಿಲೀಫ್ ಸಿಕ್ಕಿದೆ. ರಜತ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಮತ್ತೊಮ್ಮೆ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.
ಕೋರ್ಟ್ ವಿಚಾರಣೆಗೆ ಹಾಜರಾದ ಬಳಿಕ ವಿನಯ್ ಗೌಡ ಅವರು ಪ್ರತಿಕ್ರಿಯೆ ನೀಡಿ,ನನಗೆ ಕಣ್ಣು ಇನ್ಫೆಕ್ಷನ್ ಆಗಿತ್ತು. ಹಾಗಾಗಿ ನನಗೆ ಮೊದಲ ಹಿಯರಿಂಗ್ ದಿನ ಬರೋದಕ್ಕೆ ಆಗಿರಲಿಲ್ಲ. ಇವತ್ತು ಕೋರ್ಟ್‌ಗೆ ಪೊಲೀಸ್ರು ಬರೋದಕ್ಕೆ ಹೇಳಿದ್ರು. ಪ್ರತಿ ದಿನ ಠಾಣೆಗೆ ಹೋಗಿ ಸೈನ್ ಮಾಡಿ ಬರ್ತಿದ್ದೆ. ನನ್ನ ವಾರೆಂಟ್ ರೀ ಕಾಲ್ ಮಾಡಿದ್ದಾರೆ. ನಾನು ನನ್ನ ಸಮಸ್ಯೆಯನ್ನು ನ್ಯಾಯಾಧೀಶರ ಮುಂದೆ ಹೇಳಿದ್ದೆ. ಮುಂದಿನ ಹಿಯರಿಂಗ್‌ಗೆ ತಪ್ಪದೇ ಹಾಜರಾಗ್ತೀನಿ.ಜೈಲಿಗೆ ಹೋದ ರಜತ್ ಬಗ್ಗೆ ನಾನು ಏನೂ ಹೇಳಲ್ಲ. ಏನೂ ಹೇಳೋ ಸ್ಥಿತಿಯಲ್ಲಿ ನಾನಿಲ್ಲ. ಸದ್ಯ ನಾನು ದಂಡ ಕಟ್ಟಿ ನ್ಯಾಯಾಲಕ್ಕೆ ಮನವಿ ಮಾಡಿದ್ದೇನೆ. ಮುಂದಿನದ್ದು ನನ್ನ ವಕೀಲರು ನೋಡಿಕೊಳ್ತಾರೆ ಎಂದು ಹೇಳಿದ್ದಾರೆ.