ರೀಲ್ಸ್‌ ಪ್ರಿಯನಿಗಾಗಿ ಗಂಡನನ್ನೆ ಕತ್ತು ಹಿಸುಕಿ ಸಾಯಿಸಿದ ಮಹಿಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೀಲ್ಸ್‌ ಪ್ರಿಯನಿಗಾಗಿ ಮಹಿಳೆಯೊಬ್ಬಳು ದುಪ್ಪಟ್ಟಾದಿಂದ ತನ್ನ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಹರಿಯಾಣದ ಹಿಸಾರ್‌ ಜಿಲ್ಲೆಯಲ್ಲಿ ನಡೆದಿದೆ.

ಬ್ಬರ ಕಳ್ಳಸಂಬಂಧ ಪತ್ತೆಹಚ್ಚಿದ ಬಳಿಕ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಮುಗಿಸಿದ್ದಾಳೆ. ರವೀನಾ (32) ಮತ್ತು ಸುರೇಶ್ ಕೊಲೆ ಆರೋಪಿಗಳಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

32 ವರ್ಷದ ಈ ರವೀನಾ ಮತ್ತು ರೀಲ್ಸ್‌ ಸ್ಟಾರ್‌ ಸುರೇಶ್‌ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಹರಿಯಾಣದ ಪ್ರೇಮ್‌ನಗರಲ್ಲಿ ಇಬ್ಬರು ಒಟ್ಟಿಗೆ ಶಾರ್ಟ್‌ ವಿಡಿಯೋ ಮಾಡಲು ಪ್ರಾರಂಭಿಸಿದ್ದರು. ಪ್ರವೀಣ್ ಹಾಗೂ ರವೀನಾ ದಂಪತಿಗೆ 6 ವರ್ಷದ ಮಗ ಸಹ ಇದ್ದ. ಆಂಟಿಯ ಈ ರೀಲ್ಸ್‌ಗೆ ರವೀನಾಳ ಪತಿ ಪ್ರವೀಣ್‌ ಮತ್ತು ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದಾಗ್ಯೂ ಸುಮಾರು ಒಂದೂವರೆ ವರ್ಷಗಳ ಕಾಲ ಇಬ್ಬರು ಕಂಟೆಂಟ್‌ ಕ್ರಿಯೇಟ್‌ ಮಾಡುತ್ತಿದ್ದರು. ಇದರಿಂದ ಇವರಿಬ್ಬರ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ಗಳ ಸಂಖ್ಯೆ 34,000ಕ್ಕೆ ತಲುಪಿತ್ತು.

ಜನಪ್ರಿಯರಾಗುತ್ತಿದ್ದಂತೆ ರವೀನಾ ಇತರೆ ಕಲಾವಿದರನ್ನೂ ಸೇರಿಸಿಕೊಂಡು ರೀಲ್ಸ್‌ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ರೀಲ್ಸ್‌ ಮಾಡುತ್ತಲೇ ರವೀನಾ ಮತ್ತು ಸುರೇಶ್‌ ಚಕ್ಕಂದ ಆಡಲು ಶುರು ಮಾಡಿದ್ದರಂತೆ. ಕಳೆದ ಮಾರ್ಚ್‌ 25ರಂದು ರವೀನಾಳ ಪತಿ ಪ್ರವೀಣ್‌ (35), ಇವರಿಬ್ಬರೂ ಅಕ್ರಮ ಸಂಬಂಧ ಇರುವುದನ್ನು ಪತ್ತೆ ಹಚ್ಚಿದ್ದ. ಹೀಗಾಗಿ ರವೀನಾ ತನ್ನ ಪ್ರಿಯಕರ ಸುರೇಶ್‌ ಜೊತೆ ಸೇರಿ ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಬೆಳಗಿನ ಜಾವ 2.30 ರ ಸುಮಾರಿಗೆ, ಇಬ್ಬರೂ ಪ್ರವೀಣ್ ಮೃತದೇಹವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ರವೀನಾಳ ಮನೆಯಿಂದ 6 ಕಿಲೋ ಮೀಟರ್ ದೂರದಲ್ಲಿರುವ ಚರಂಡಿಯಲ್ಲಿ ಎಸೆದು ಬಂದಿದ್ದರು. ರವೀನಾ ಬೈಕ್‌ನಲ್ಲಿ ಗಂಡನ ಮೃತದೇಹ ಸಾಗಿಸುತ್ತಿರುವ ಸಿಸಿಟಿವಿ ವಿಡಿಯೋ ಪೊಲೀಸರ ತನಿಖೆ ವೇಳೆ ಹೊರಬಂದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!