ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಜನರಿಗೆ ರೀಲ್ಸ್ ಹುಚ್ಚು ಹೆಚ್ಚಾಗಿದ್ದು, ವ್ಯೂವರ್ಸ್ ಹೆಚ್ಚಿಸಿಕೊಳ್ಳೋಕಾಗಿ ಏನನ್ನು ಮಾಡೋದಕ್ಕು ತಯಾರಿದ್ದಾರೆ. ತಮ್ಮ ಪ್ರಾಣಕ್ಕೆ ಹಾನಿಯಾದರೂ ಪರವಾಗಿಲ್ಲ ಎನ್ನುವ ಮನಸ್ಥಿತಿ ಎದುರಾಗಿದೆ.
ಮಹಿಳೆಯೊಬ್ಬರು ತನ್ನ ತಲೆಯ ಮೇಲೆ ಎರಡು ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಎರಡು ಸಿಲಿಂಡರ್ಗಳನ್ನು ಒಂದರ ಮೇಲೆ ಒಂದರಂತೆ ಇಟ್ಟುಕೊಂಡು ಬೀಳದಂತೆ ಬ್ಯಾಲೆನ್ಸ್ ಮಾಡುತ್ತಾ ನೃತ್ಯ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮಹಿಳೆಯ ಈ ಸ್ಟಂಟ್ ಕಂಡು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕೆಲವರು ಪ್ರಾಣಕ್ಕೆ ಕಂಟಕ ಎಂದು ಬೈದಿದ್ದಾರೆ.
ಈ ರೀತಿ ಸ್ಟಂಟ್ ಮಾಡುತ್ತಿರುವ ಮಹಿಳೆಯ ಹೆಸರು ನೀತು. ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನೀತು ಇಂತಹ ಸ್ಟಂಟ್ಗಳ ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ 59 ಸಾವಿರ ಫಾಲೋವರ್ಸ್ಗಳನ್ನು ನೀತು ಹೊಂದಿದ್ದಾರೆ.
View this post on Instagram