ರೀಲ್ಸ್‌ ಹುಚ್ಚಿಗೆ ಪ್ರಾಣವೇ ಹೋಯ್ತು..100 ಅಡಿ ಆಳ ಕೆಳಗೆ ಬಿದ್ದ ಯುವಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೀಲ್ಸ್‌ ಹುಚ್ಚಾಟಕ್ಕೆ ಮತ್ತೊಬ್ಬ ಯುವಕ ಪ್ರಾಣಬಿಟ್ಟಿದ್ದಾನೆ. ಯುವಕನೊಬ್ಬ 100 ಅಡಿ ಎತ್ತರದಿಂದ  ನೀರಿಗೆ ಹಾರಿ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು 18 ವರ್ಷದ ತೌಸಿಫ್ ಎಂದು ಗುರುತಿಸಲಾಗಿದೆ. ತೌಸಿಫ್‌ ರೀಲ್ಸ್‌ ಮಾಡಲು ತನ್ನ ಸ್ನೇಹಿತರಿಗೆ ಫೋನ್‌ ನೀಡಿ ಎತ್ತರಕ್ಕೆ ಹೋಗಿ ನಿಂತಿದ್ದ. ನಂತರ ಮೇಲಿನಿಂದ ನೀರಿಗೆ ಹಾರಿದ್ದಾನೆ. ಇದನ್ನು ಆತನ ಸ್ನೇಹಿತರು   ರೆಕಾರ್ಡ್ ಮಾಡಿದ್ದಾರೆ.

ಕೆಳಕ್ಕೆ ಬಿದ್ದ ಯುವಕ ಎಷ್ಟು ಸಮಯವಾದರು ಮೇಲೆ ಬರಲಿಲ್ಲ, ತೌಸಿಫ್‌ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ನೇಹಿತರು ತಕ್ಷಣವೇ ಆತನನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ  ಯತ್ನ ಫಲಕಾರಿಯಾಗಿಲ್ಲ. ಈ ಘಟನೆ ಬಗ್ಗೆ ಸ್ಥಳಿಯರು ಪೋಲಿಸರಿಗೆ ಮಾಹಿತಿ ನೀಡಿದಾಗ ಅಧಿಕಾರಿಗಳು ಶೋಧಕಾರ್ಯಾಚರಣೆ ನಡೆಸಿದ್ದಾರೆ ಆಗ ಮೃತ ದೇಹ ಪತ್ತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!