May 11, 2026
Monday, May 11, 2026
spot_img

SHOCKING | ರೀಲ್ಸ್‌ ಹುಚ್ಚಿಗೆ ಪ್ರಾಣವೇ ಹೋಯ್ತು! ಕುತ್ತಿಗೆಗೆ ಹಾಕಿದ್ದ ಕುಣಿಕೆ ಬಿಗಿಯಾಗಿ ಮಹಿಳೆ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೋಶಿಯಲ್‌ ಮೀಡಿಯಾ ಅತಿಯಾದ ಬಳಕೆಯಿಂದ ಜನರಿಗೆ ಫೇಮಸ್‌ ಆಗುವ ಹುಚ್ಚು ಹೆಚ್ಚಾಗಿದೆ. ನಾನು ಎಲ್ಲರಿಗಿಂತ ಭಿನ್ನ ಎಂದು ತೋರಿಸಿಕೊಳ್ಳೋಕೋ, ಒಂಟಿತನದಿಂದಲೋ ಜನ ರೀಲ್ಸ್‌ ದಾಸರಾಗಿದ್ದಾರೆ. ಇದೇ ರೀತಿ ಕುತ್ತಿಗೆಗೆ ಹಗ್ಗ ಹಾಕಿಕೊಂಡು ರೀಲ್ಸ್‌ ಮಾಡುವ ವೇಳೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 27 ವರ್ಷದ ಮೋಹಿನಿ ನೇಣು ಹಾಕಿಕೊಳ್ಳುವ ರೀಲ್ಸ್‌ ಮಾಡುತ್ತಿದ್ದರು. ನೇಣಿನ ಕುಣಿಕೆ ಬಿಗಿಯಾಗಿದ್ದು, ಆಕೆ ಮೃತಪಟ್ಟಿದ್ದಾರೆ.

ಸ್ಟೂಲ್‌ ಮೇಲೆ ನಿಂತು ನೇಣು ಹಾಕಿಕೊಳ್ಳುವಾಗ ಸ್ಟೂಲ್‌ ಬಿದ್ದು, ಕುಣಿಕೆ ಬಿಗಿಯಾಗಿ ಮೃತಪಟ್ಟಿದ್ದಾರೆ. ಮೋಹಿನಿಯ ನಾಲ್ಕು ವರ್ಷದ ಮಗಳು ರೂಮಿಗೆ ಬಂದು, ತಾಯಿಯನ್ನು ನೋಡಿ ಕೂಗಿಕೊಂಡಿದ್ದಾಳೆ.

ತಕ್ಷಣ ಅಕ್ಕಪಕ್ಕದ ಮನೆಯವರು ಧಾವಿಸಿ ಕುಣಿಕೆಯಿಂದ ಕೆಳಕ್ಕೆ ಇಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !