ಹೊಸದಿಗಂತ ವರದಿ,ಬಾಗಲಕೋಟೆ:
ನವನಗರದಿಂದ ಬೆಂಗಳೂರಿಗೆ ಹೋಗುವಾಗ ಪ್ರಯಾಣಿಕನೋರ್ವನಿಗೆ ಕುಡಿಯಲು ನೀರು ಕೊಡದ್ದಕ್ಕೆ ಜಿಲ್ಲಾ ಗಾಹಕರ ಆಯೋಗ ದಂಡದೊಂದಿಗೆ ಟಿಕೆಟ್ ಹಣ ವಾಪಸ್ ಮಾಡುವಂತೆ ಆದೇಶಿಸಿದೆ.
ವಿದ್ಯಾಗಿರಿಯ ಹಾಲೇಶ ಹಾವನೂರ ಎಂಬುವರು ಬಾಗಲಕೋಟೆಗೆ ಬಂದಿದ್ದ ತನ್ನ ಸ್ನೇಹಿತ ಬೆಂಗಳೂರಿನ ಆಡುಗೋಡಿ ಪೋಲೀಸ ಕ್ವಾರ್ಟರ್ಸ ನಿವಾಸಿ ಪ್ರಶಾಂತ ಕಮ್ಮಾರ ತಿರುಗಿ ಬೆಂಗಳೂರಿಗೆ ಹೋಗುವ ಸಲುವಾಗಿ ರೆಡ್ ಬಸ್ ಮೊಬೈಲ್ ಅಪ್ಲಿಕೇಶನ್ ಮೂಲಕ ಆರೆಂಜ್ ಬಸ್ ಟಿಕೆಟ್ ಬುಕ್ ಮಾಡಿರುತ್ತಾನೆ.
ಆರೆಂಜ್ ಬಸ್ ನವರು ರೆಡ್ ಬಸ್ ಅಪ್ಲಿಕೇಶನ್ ದಲ್ಲಿ ತನ್ನ ಪ್ರಯಾಣಿಕರಿಗೆ ನೀರಿನ ಬಾಟಲ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ವೈಫೈ, ವಯ್ಯಕ್ತಿಕ ಟಿವಿ, ಪತ್ರಿಕೆ ಸೇರಿದಂತೆ 12 ಸೇವೆಗಳನ್ನು ನೀಡುವದಾಗಿ ತಿಳಿಸಿದ್ದು ಇರುತ್ತದೆ.
ಆದರೆ ಅಂದು ಪ್ರಶಾಂತ ಕಮ್ಮಾರ ಬಸ್ಸನ್ನು ಏರಿದಾಗ ಈ ಯಾವ ಸೌಲಭ್ಯಗಳು ಇರುವುದಿಲ್ಲ.
ಬಾಯಾರಿಕೆಯಾಗಿ ಬಸ್ ಸಿಬ್ಬಂದಿಗೆ, ಕುಡಿಯಲು ನೀರು ಕೊಡಿ ಎಂದಾಗ ಬಾಟಲ್ ಬಿಡಿ ತಮ್ಮ ಹತ್ತಿರವಿರುವ ನೀರನ್ನಾದರೂ ಕೊಡಿ ಎಂದರೆ ಕೊಟ್ಟಿರುವದಿಲ್ಲ.
ನೊಂದ ಪ್ರಯಾಣಿಕ ಪ್ರಶಾಂತ ಹಾಗೂ ಸ್ನೇಹಿತ ಹಾಲೇಶ ಸೇರಿ ಜಿಲ್ಲಾ ಗಾಹಕರ ಆಯೋಗದಲ್ಲಿ ರೆಡ್ ಬಸ್ ಅಪ್ಲಿಕೇಶನ್ ಬೆಂಗಳೂರು ಮತ್ತು ಆರೆಂಜ್ ಬಸ್ ವಿರುದ್ಧ ದೂರು ದಾಖಲಿಸುತ್ತಾರೆ.
ಸಾರಾ ಸಾರಾ ವಿಚಾರಣೆ ನಡೆಸಿ ಎಲ್ಲ ದಾಖಲೆಗಳು ಹಾಗೂ ಸಾಕ್ಷಿ ಗಳನ್ನು ಪರಿಶೀಲಿಸಿದ ಆಯೋಗ, ಎದುರುದಾರರು 45 ದಿನಗಳಲ್ಲಿ ಟಿಕೆಟ್ ಮೊತ್ತ ರೂ. 750/- ನ್ನು, ಮಾನಸಿಕ ವ್ಯಥೆ ಗೆ ರೂ. 5000/- ಹಾಗೂ ದಾವಾ ವೆಚ್ಚ ರೂ. 2000/- ಗಳನ್ನು ಕೊಡಬೇಕು ಅಂತಾ ಆದೇಶ ಮಾಡಿದೆ.
ತಪ್ಪಿದಲ್ಲಿ ಶೇಕಡಾ ರೂ. 9/- ರಂತೆ ಬಡ್ಡಿ ಸಮೇತ ಕೊಡಬೇಕು ಎಂದು ಅಧ್ಯಕ್ಷರು ವಿಜಯಕುಮಾರ ಪಾವಲೆ ಸದಸ್ಯರು ಗಳಾದ ರಂಗನಗೌಡ ದಂಡಣ್ಣವರ ಹಾಗೂ ಶ್ರೀಮತಿ ಸಮಿವುನ್ನೀಸಾ ಅಬ್ರಾರ ಅವರಿದ್ದ ನ್ಯಾಯಪೀಠ ಆದೇಶಿಸಿದೆ.