Friday, December 8, 2023

Latest Posts

ಫುಟ್ ಬಾಲ್ ಪ್ಲೇಯರ್ ಕ್ರಿಸ್ಟಿಯಾನೋ ರೋನಾಲ್ಡೋ ಗೆ 2 ಪಂದ್ಯದಿಂದ ಬ್ಯಾನ್, 50 ಲಕ್ಷ ದಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫಿಫಾ ವಿಶ್ವಕಪ್ 2022ರ ಟೂರ್ನಿಯಲ್ಲಿ ಪೋರ್ಚುಗಲ್ ತಂಡ ಮೊದಲ ಪಂದ್ಯಕ್ಕೆ ಸಜ್ಜಾದ ಬೆನ್ನಲ್ಲೇ ದೊಡ್ಡ ಹೊಡೆತ ಸಿಕ್ಕಿದ್ದು, ಸ್ಟಾರ್ ಪ್ಲೇಯರ್ ಕ್ರಿಸ್ಟಿಯಾನೋ ರೋನಾಲ್ಡೋ ಗೆ ಎರಡು ಪಂದ್ಯ ಆಡದಂತೆ ನಿಷೇಧಿಸಲಾಗಿದೆ.

ಹಳೆ ಪ್ರಕರಣದಲ್ಲಿ ರೋನಾಲ್ಡೋ ನಿಯಮ ಮೀರಿ ವರ್ತಿಸಿರುವುದು ಸಾಬೀತಾಗಿದೆ. ಹೀಗಾಗಿ ಎರಡು ಪಂದ್ಯ ಆಡದಂತೆ ನಿಷೇಧ , 50 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಆದರೆ ಎರಡು ಪಂದ್ಯದ ನಿಷೇಧ ಫಿಫಾ ವಿಶ್ವಕಪ್ ಟೂರ್ನಿಗೆ ಅನ್ವಯವಾಗುವುದಿಲ್ಲ.

2022ರ ಎಪ್ರಿಲ್ ತಿಂಗಳಲ್ಲಿ ರೋನಾಲ್ಡೋ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುತ್ತಿದ್ದ ಸಮಯದಲ್ಲಿ ಎವರ್ಟನ್ ಎಫ್‍ಸಿ ವಿರುದ್ದ ಸೋಲುಕಂಡಿದ್ದರು. ಈ ವೇಳೆ ಮೈದಾನದಿಂದ ಹೊರಹೋಗುತ್ತಿರುವ ವೇಳೆ ಫೋಟೋ ಕ್ಲಿಕ್ಕಿಸಲು ಬಂದ ಅಭಿಮಾನಿಯ ಮೇಲೂ ಸಿಟ್ಟಾದ ರೋನಾಲ್ಡೋ, ಅಭಿಮಾನಿಯ ಫೋನ್ ಕಿತ್ತು ನೆಲಕ್ಕೆ ಎಸೆದಿದ್ದರು.

ಈ ಘಟನೆಯನ್ನುಗಂಭೀರವಾಗಿ ಪರಿಗಣಿಸಿದ ಲೀಗ್ ಫುಟ್ಬಾಲ್ ಆಡಳಿತ ಮಂಡಳಿ, ಇದೀಗ ಶಿಕ್ಷೆ ಪ್ರಕಟಗೊಂಡಿದೆ. 50 ಲಕ್ಷ ರೂಪಾಯಿ ದಂಡ ಹಾಗೂ 2 ಪಂದ್ಯದ ನಿಷೇಧ ಶಿಕ್ಷೆ ನೀಡಲಾಗಿದೆ.
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ರೋನಾಲ್ಡೋ ನಾಯಕತ್ವದ ಪೂರ್ಚುಗಲ್ ತಂಡ ಇಂದು ಘಾನಾ ವಿರುದ್ಧ ಮೊದಲ ಪಂದ್ಯ ಆಡಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!