ಈಗ ಸೋಷಿಯಲ್ ಮೀಡಿಯಾಗಳಲ್ಲಿ ಡೇಟಿಂಗ್ ಟ್ರೆಂಡ್ ಗಳು ಹೆಚ್ಚಾಗಿದ್ದು, ಯುವಜನತೆ ತಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿವೆ. ಅದರಲ್ಲಿ ಈಗ ಚರ್ಚೆಗೆ ಬಂದಿರೋದು ಎಬಿಸಿ ಡೇಟಿಂಗ್. ಹೀಗಂದ್ರೇನು? ಇದು ಕಪಲ್ಸ್ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? ಎನ್ನುವುದನ್ನು ನೋಡೋಣ.
ಸಾಮಾಜಿಕ ಮಾಧ್ಯಮಗಳಿಂದಾಗಿ ಈ ಎಬಿಸಿ ಡೇಟಿಂಗ್ ಅಥವಾ ಆಲ್ಫಾಬೆಟ್ ಡೇಟಿಂಗ್ ಪರಿಕಲ್ಪನೆಯು ಭಾರಿ ಜನಪ್ರಿಯವಾಗುತ್ತಿದೆ. ಇಂಗ್ಲಿಷ್ ವರ್ಣಮಾಲೆಯ ಅಕ್ಷರಗಳನ್ನು ಆಧರಿಸಿ ಡೇಟಿಂಗ್ ನಿಗದಿಪಡಿಸುವುದನ್ನು ಎಬಿಸಿ ಡೇಟಿಂಗ್ ಎಂದು ಕರೆಯಲಾಗುತ್ತದೆ.
ಆಲ್ಫಾಬೆಟ್ ಡೇಟಿಂಗ್ ನಿಮ್ಮ ಹಳೆಯ ಡೇಟಿಂಗ್ ಅಭ್ಯಾಸಗಳನ್ನು ಬ್ರೇಕ್ ಮಾಡಲು ಸಹಾಯ ಮಾಡುತ್ತದೆ ಮತ್ತು ಹೊಸದನ್ನು ಒಟ್ಟಿಗೆ ಕಾರ್ಯಗತಗೊಳಿಸಲು ನಿಮಗೆ ಚಾಲೆಂಜ್ ಮಾಡುತ್ತದೆ.
ಅನೇಕ ಜೋಡಿಗಳು ಒಂದೇ ಡೇಟ್ಸ್ ಗೆ ಪದೇ ಪದೇ ಮರಳುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಈ ಡೇಟ್ಸ್ ನಲ್ಲಿ ಡಿನ್ನರ್, ಸಿನಿಮಾ ಅಥವಾ ಕಾಫಿ ಡೇಟ್ ಗೆ ಕೊನೆಗೊಳ್ಳುತ್ತದೆ. ಮತ್ತೆ ಇದು ಪುನಹ ಪರಿವರ್ತನೆಗೊಳ್ಳುತ್ತದೆ. ಆಲ್ಫಾಬೆಟ್ ಡೇಟಿಂಗ್ ಒಂದೇ ರೀತಿಯ ಡೇಟ್ಸ್ ಗಳನ್ನು ಮಾಡದಂತೆ, ಹೊಸ ರೀತಿಯಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ಖುಷಿಪಡಿಸಲು ಪ್ರೋತ್ಸಾಹಿಸುತ್ತದೆ.
ಈ ಟ್ರೆಂಡ್ ಫಾಲೋ ಮಾಡಲು,A ನಿಂದ Z ವರೆಗೆ ವರ್ಣಮಾಲೆಯನ್ನು ಬಳಸಿಕೊಂಡು ಸೂಕ್ತವಾದ ಡೇಟ್ ಪಟ್ಟಿಯನ್ನು ಮಾಡಿ. ಉದಾಹರಣೆಗೆ, ನೀವು ಬಿಲ್ಲುಗಾರಿಕೆ ಅಥವಾ ಆರ್ಕೇಡ್ ಡೇಟ್‌ನೊಂದಿಗೆ ಪ್ರಾರಂಭಿಸಬಹುದು, ನಂತರ ಬೌಲಿಂಗ್ ಅಥವಾ ಬೀಚ್ ಡೇಟ್‌ಗೆ ಹೋಗಬಹುದು. ಅದೇ ರೀತಿ, Z ಅಕ್ಷರದವರೆಗೆ ಡೇಟಿಂಗ್ ವಿಚಾರಗಳನ್ನು ಪಟ್ಟಿ ಮಾಡಿಕೊಂಡರೆ
ಇದೆ ಆಲ್ಫಾಬೆಟ್ ಡೇಟಿಂಗ್.