ಯಾವುದೇ ಸಂಬಂಧವನ್ನು ಬಲಪಡಿಸಲು ನಂಬಿಕೆ ಬಹಳ ಮುಖ್ಯ. ಈ ದಿನಗಳಲ್ಲಿ ಸಣ್ಣಪುಟ್ಟ ಅಸಮಾಧಾನಗಳು, ಕೋಪ ಮತ್ತು ಕೆಲಸದ ಒತ್ತಡವು ಸಂಬಂಧಗಳನ್ನು ಸುಲಭವಾಗಿ ಮುರಿಯಬಹುದು.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸಂಬಂಧಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ದೀರ್ಘಾವಧಿಯ ಸಂಗಾತಿಯನ್ನು ಆಯ್ಕೆ ಮಾಡುವ ಬದಲು, ಕೆಲವು ದಿನಗಳವರೆಗೆ ಸಂಗಾತಿಯನ್ನು ಆಯ್ಕೆ ಮಾಡ್ತಾರೆ.
ಪ್ರತಿಯೊಂದು ಹೆಜ್ಜೆಗೂ ಅಡ್ಡಗಾಲು ಹಾಕುವುದು ಸಂಬಂಧ ಹಾಳು ಮಾಡುತ್ತದೆ. ಸ್ವಾತಂತ್ರ್ಯ ಇಬ್ಬರಿಗೂ ಬೇಕು. ಆದ್ರೆ ಇತ್ತೀಚಿನ ದಿನಗಳಲ್ಲಿ ದಬ್ಬಾಳಿಕೆ ಹೆಚ್ಚಾಗಿದೆ. ಎಲ್ಲದಕ್ಕೂ ಸಂಗಾತಿ ಅಡ್ಡಿಯಾಗುವುದು ಬ್ರೇಕ್ ಅಪ್ ಗೆ ಸುಲಭವಾಗಿ ದಾರಿ ಮಾಡಿಕೊಡುತ್ತದೆ.
ಸ್ವಾತಂತ್ರ್ಯದ ಜೊತೆ ಗೌಪ್ಯತೆ ಕೂಡ ಮುಖ್ಯ. ಸಂಗಾತಿ ಬೇರೆಯವರ ಜೊತೆ ಮಾತನಾಡಬಾರದು. ಸಣ್ಣ ಸಣ್ಣ ವಿಷ್ಯಗಳನ್ನು ತನ್ನ ಮುಂದೆ ಹೇಳಬೇಕೆಂದು ಕೆಲವರು ನಿರೀಕ್ಷೆ ಮಾಡ್ತಾರೆ. ವಿಷ್ಯವನ್ನು ಹೇಳದೆ ಹೋದಾಗ ಗಲಾಟೆ ಶುರುವಾಗುತ್ತದೆ.
ಸುರಕ್ಷತೆ, ವಿಶ್ವಾಸ, ನಂಬಿಕೆ ಬಂದಾಗ ಮಾತ್ರ ಸಂಬಂಧ ಗಟ್ಟಿಯಾಗಲು ಸಾಧ್ಯ.