ದಂಪತಿಗಳಲ್ಲಿ ಹಲವು ವಿಷಯಗಳನ್ನು ಪರಸ್ಪರ ಟೀಕಿಸಲು ಅವಕಾಶವಿದ್ದರೂ, ಅದನ್ನು ಸದಾ ಮಾಡಬೇಕೆಂದಿಲ್ಲ. ಪತ್ನಿಯರು ತಮ್ಮ ಗಂಡಂದಿರನ್ನು ನಿಯಂತ್ರಣದಲ್ಲಿಡಬೇಕು ಎಂಬ ನಿಲುವು ಸಹಜ. ಮೊಬೈಲ್ ಗೇಮ್‌ಗಳು, ಸ್ವಚ್ಛತೆ, ಉಡುಪುಗಳ ಬಗ್ಗೆ ನಾವು ಟೀಕೆ ಮಾಡಬಹುದು. ಆದರೆ ಕೆಲವು ಸಂಗತಿಗಳು ನಿರರ್ಥಕ. ನಾವು ಅದನ್ನು ಟೀಕೆ ಮಾಡಬೇಕಾಗಿಲ್ಲ. ಅಂತಹ ಕೆಲವು ಸಂಗತಿಗಳು ಇಲ್ಲಿವೆ.
ಕ್ರೀಡಾ ಪ್ರೇಮ – ಪತಿಯು ನೋಡ ಬಯಸುವ ಕ್ರೀಡೆಗಳ ಬಗ್ಗೆ ವ್ಯರ್ಥವಾಗಿ ಮಾತಾಡದೆ, ಅದನ್ನು ಆಸಕ್ತಿಯಿಂದ ವೀಕ್ಷಿಸುತ್ತಾರೆ ಎಂಬುದನ್ನು ಒಪ್ಪಿಕೊಳ್ಳಿ. ನಾವೆಷ್ಟು ಧಾರಾವಾಹಿಗಳನ್ನು ಪ್ರೀತಿಸುತ್ತೇವೋ, ಅವರು ಕ್ರೀಡೆಯನ್ನು ಅದೇ ರೀತಿ ಪ್ರೀತಿಸುತ್ತಾರೆ.
ಶರೀರದ ಆಕಾರ – ಪತ್ನಿಯರು ತಾವು ದಪ್ಪಗಿದ್ದೇವೆ ಎಂದು ಹೇಳುವುದನ್ನು ಬಿಡಬೇಕು. ಗಂಡನಿಗೆ ತನ್ನ ಪತ್ನಿ ದೇವತೆಯೇ! ಅವರ ದೃಷ್ಟಿಯಲ್ಲಿ ನೀವು ಸದಾ ಸುಂದರವಾಗಿಯೇ ಕಾಣುತ್ತೀರಿ.
ಅಭಿಮಾನ ಹಾಗೂ ಪ್ರೇಮದ ಕೊರತೆ – ಗಂಡಂದಿರು ಪ್ರೀತಿ ತೋರುವ ಶೈಲಿ ವಿಭಿನ್ನ. ನೀವು ಪ್ರೀತಿ ತುಂಬಿದ ಚಿಕ್ಕದಾದ ಬರಹಗಳನ್ನು ನೋಟ್ ಪ್ಯಾಡ್ ನಲ್ಲಿ ಬರೆದು ಮನೆಯ ಕೆಲವೊಂದು ಜಾಗದಲ್ಲಿ ಅಂಟಿಸಿಡಿ ಈ ರೀತಿ ಮಾಡುವುದರಿಂದ ಅವರಲ್ಲೂ ಪ್ರೀತಿ ವ್ಯಕ್ತಪಡಿಸುವ ಅಭ್ಯಾಸ ಹುಟ್ಟಿಸಬಹುದು.
ಕಚೇರಿಯ ಹೊಣೆಗಾರಿಕೆಗಳು – ಕೆಲವೊಂದು ಉದ್ಯೋಗಗಳು ಹೆಚ್ಚು ಸಮಯ ಬೇಡಬಹುದು. ಅವರು ತಡವಾಗಿ ಮನೆಗೆ ಬರುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ.
PMS ಬಗ್ಗೆ ಅಳಲು – ಗಂಡಂದಿರು ಸಹಾನುಭೂತಿಪೂರ್ಣರಾಗಿದ್ದರೂ, ಅದನ್ನೇ ದಳವಾಗಿಟ್ಟುಕೊಂಡು ನಿಮ್ಮ ಸಮಸ್ಯೆ ಹೇಳುವುದರಿಂದ ಅವರು ನಿಮ್ಮನ್ನು ಕಡೆಗಣಿಸುವ ಸಾಧ್ಯತೆ ಇದೆ.
ಡ್ರೈವಿಂಗ್ ಶೈಲಿ – ನೀವು ಸುಮ್ಮನಿರಲಿ, ಇಲ್ಲದಿರಲಿ ಅವರು ತಮ್ಮ ಚಾಲನಾ ಶೈಲಿಯನ್ನು ಬದಲಾಯಿಸುವುದಿಲ್ಲ. ತೊಂದರೆಯಾಗಿದ್ದರೆ, ನಿಮ್ಮ ಭಾವನೆಗಳನ್ನು ಗಂಭೀರವಾಗಿ ಹೇಳಿಕೊಳ್ಳಿ ಆಗ ಡ್ರೈವಿಂಗ್ ಶೈಲಿ ಬದಲಾಯಿಸಿಕೊಳ್ಳುವ ಅವಕಾಶವಿದೆ.
ಸಂಗೀತದ ಆಯ್ಕೆ – ಅವರ ಸಂಗೀತವನ್ನು ಟೀಕಿಸುವ ಬದಲು, ಇಬ್ಬರೂ ಒಟ್ಟಿಗೆ ಆನಂದಿಸಬಹುದಾದ ಪ್ಲೇಲಿಸ್ಟ್ ಅನ್ನು ಸಿದ್ಧಪಡಿಸಿ.
ಮನೆ ಸ್ವಚ್ಛತೆ – ಮನೆ ಸ್ವಚ್ಛತೆಗೆ ಅವರು ನೆರವಾಗಲು ಪ್ರಯತ್ನಿಸಿದರೆ, ಅವರ ಮೇಲೆಯೇ ರೇಗಬೇಡಿ. ಮನೆಗೆಲಸದಲ್ಲಿ ಕೆಲವು ದಿನ ಅವರು ಮಾಡುವ ತಪ್ಪುಗಳನ್ನು ಸಹಿಸಿಕೊಳ್ಳಿ. ನಂತರ ಅವ್ರಿಗೆ ಅರಿವಾಗುತ್ತದೆ.
ಅವರ ಪೋಷಕರು – ನೀವು ನಿಮ್ಮ ಅತ್ತೆಯ ಬಗ್ಗೆ ಹೆಚ್ಚಾಗಿ ಮಾತನಾಡಲು ಇಚ್ಛಿಸುವುದಿಲ್ಲವೆ? ಹಾಗೆಯೇ, ಅವರು ಕೂಡ ನಿಮ್ಮ ತಾಯಿಯ ಬಗ್ಗೆ ಹೆಚ್ಚು ಕೇಳಲು ಇಚ್ಛಿಸುವುದಿಲ್ಲ. ಹೀಗಾಗಿ ನಿಮ್ಮ ಹೆತ್ತವರೊಂದಿಗೆ ಮಾತನಾಡಲು ಒತ್ತಡ ಹೇರಬೇಡಿ.
ಮದುವೆಯ ಜೀವನದಲ್ಲಿ ಪರಸ್ಪರ ಸಹಾನುಭೂತಿ, ಸ್ಪಷ್ಟ ಸಂವಹನ, ಮತ್ತು ಒಟ್ಟಿಗೆ ಉತ್ತಮ ಸಮಯ ಕಳೆಯುವ ಮನೋಭಾವ ಮುಖ್ಯ. ಜಗಳ ಬಿಟ್ಟು, ಒಗ್ಗಟ್ಟನ್ನು ಹೆಚ್ಚಿಸುವ ಪ್ರಯತ್ನ ಮಾಡುವುದು ಜೀವನವನ್ನು ಸುಂದರವಾಗಿಸುತ್ತದೆ.